ಪುತ್ತೂರು: ನೆಹರು ಯುವ ಕೇಂದ್ರ ಮಂಗಳೂರು, ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ಸಹಯೋಗದಲ್ಲಿ ಶ್ರೀರಾಮ ಕ್ರೀಡಾಂಗಣದಲ್ಲಿ ಜನಸಂಘ ಸ್ಥಾಪಕ ಮತ್ತು ಮಾನವತಾವಾದಿ ದೀನ್ ದಯಾಳ್ ಉಪಾಧ್ಯಯರವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಗೌರವ ಸಲ್ಲಿಸುವ ಮೂಲಕ ಜನ್ಮದಿನಾಚರಣೆಯನ್ನುಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತಾಡಿದ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ, ದೀನ್ ದಯಾಳ್ ಉಪಾಧ್ಯಯರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗೌರವ ಕೊಡುವ ಸಂಪ್ರದಾಯವನ್ನು ಮೈಗೂಡಿಸಿ ಕೊಳ್ಳೋಣ, ದೀನ್ ದಯಾಳ್ ಹಾಕಿಕೊಟ್ಟ ಹೆಜ್ಜೆಯಡಿ ನಾವೆಲ್ಲರೂ ಒಂದಾಗೋಣ ಸೇವೆಗೆ ವಿಶೇಷ ಒತ್ತು ಕೊಡುವ ಕೆಲಸ ಯುವ ಸಮುದಾಯದಿಂದ ಆಗಲಿ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀರಾಮ ಗೆಳೆಯರ ಬಳಗದ ಗೌರವಧ್ಯಕ್ಷ ಅರುಣ್ ಪುತ್ತಿಲ ಮತ್ತು ಅಧ್ಯಕ್ಷ ಹರೀಶ್ ಬಿಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ನೂಜಿ, ಅನಿಲ್ ಕುಮಾರ್, ಮೋನಪ್ಪ ಗುತ್ತಿನಪಾಲು, ಸನತ್ ಪೆರಿಯಡ್ಕ, ಬಾಲಚಂದ್ರ ಗೌಡ ಕಡ್ಯ, ಶ್ರೀಧರ ನಾಯ್ಕ್, ಸಂತೋಷ್ ಕಡ್ಯ ಸೇರಿದಂತೆ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಧನಂಜಯ ಸ್ವಾಗತಿಸಿ, ಪ್ರಸಾದ್ ವಂದಿಸಿದರು.