ಪುತ್ತೂರು: ಗಾಂಧಿ ವಿಚಾರ ವೇದಿಕೆ ಪುತ್ತೂರು ಘಟಕದ ಉದ್ಘಾಟನಾ ಕಾರ್ಯಕ್ರಮ ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯ ಹೀರೊ ಶೋ ರೂಮ್ ಕಟ್ಟಡದ ಮೇಲ್ಮಹಡಿಯಲ್ಲಿರುವ ವಿದ್ಯಾಮಾತ ಅಕಾಡಮಿಯಲ್ಲಿ ನಡೆಯಿತು.

ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಡಾ| ತಾಳ್ತಜೆ ವಸಂತ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿ ಅಧ್ಯಕ್ಷ ಶ್ರೀಧರ ಭಿಡೆ ಹಾಗೂ ವೇದಿಕೆಯ ಸಂಸ್ಥಾಪಕರು ಮತ್ತು ಮಾತೃ ಸಮಿತಿ ಕಾರ್ಯದರ್ಶಿ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಘಟಕದ ಅಧ್ಯಕ್ಷ ಝೆವಿಯರ್ ಡಿಸೋಜ ವಹಿಸಿದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ಅರವಿಂದ ಚೊಕ್ಕಾಡಿ ವೇದಿಕೆಯ ಉದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಾಹಿತಿ ಡಾ| ತಾಳ್ತಾಜೆ ಎಲ್ಲ ವೈರುಧ್ಯಗಳ ನಡುವೆಯೇ ಗಾಂಧಿ ಪರಮ ಶೇಷ್ಠರಾಗಿ ನಿಲ್ಲುತ್ತಾರೆ. ಈ ವೇದಿಕೆ ಉತ್ತಮ ಸಮಾಜ ರೂಪಿಸಲು ಸಹಕಾರಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಧರ ಭಿಡೆಯವರು ಗಾಂಧಿ ವಿಚಾರ ವೇದಿಕೆಯ ಕಾರ್ಯಗಳ ಬಗ್ಗೆ ಸಭೆಗೆ ವಿವರಿಸಿದರು. ಝೆವಿಯರ್ ಡಿಸೋಜ ಅಧ್ಯಕ್ಷೀಯ ಭಾಷಣ ಮಾಡಿ ಪುತ್ತೂರು ಘಟಕದ ಯೋಜನೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಸಿದ್ದ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಗಾಂಧಿ ವಿಚಾರ ವೇದಿಕೆಗೆ ಶುಭ ಹಾರೈಸಿ ವೇದಿಕೆಯ ಜತೆ ಕೆಲಸ ಮಾಡುವುದಾಗಿ ಹೇಳಿದರು.

ಕಾರ್ಯಕ್ರಮದ ಉದ್ಘಾಟಕ ಡಾ | ತಾಳ್ತಜೆ ವಸಂತ ಕುಮಾರ್ ರವರನ್ನು ಪುತ್ತೂರು ಘಟಕದ ಖಜಾಂಚಿ ವಸಂತ ಕುಮಾರ್ ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶ ಶ್ರೀಧರ ಭಿಡೆ ರವರನ್ನು ಘಟಕದ ಜತೆ ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯಾಯರು ಶಾಲು ಹಾಕಿ ಗೌರವಿಸಿದರು.
ಪುತ್ತೂರು ಘಟಕದ ಕಾರ್ಯದರ್ಶಿ ಚಿನ್ಮಯ ಕೃಷ್ಣ ಸ್ವಾಗತಿಸಿದರು. ಘಟಕದ ಖಜಾಂಚಿ ವಸಂತ ಕುಮಾರ್ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಪುತ್ತೂರು ಘಟಕದ ಸಂಘಟನಾ ಕಾರ್ಯದರ್ಶಿ ಪರೀಕ್ಷಿತ್ ತೋಲ್ಪಾಡಿ ನೆರವೇರಿಸಿದರು. ಮಾತೃ ಘಟಕದ ಭಾಗ್ಯೇಶ್ ರೈ ಸಹಕರಿಸಿದರು.