ವಿಟ್ಲ: ಜೆಸಿಐ ವಿಟ್ಲ ಘಟಕದ ಸಪ್ಟೆಂಬರ್ ತಿಂಗಳ ಸಾಮಾನ್ಯ ಸಭೆಯಲ್ಲಿ (GB Meeting) ವಿಟ್ಲ ಘಟಕದ ಶಿಕ್ಷಕರನ್ನು ಗೌರವಿಸುವ ‘ಗುರುವಂದನಾ” ವಿಶೇಷ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜೆಸಿಐ ವಿಟ್ಲ ಘಟಕದಲ್ಲಿರುವ ಶಿಕ್ಷಕರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಲಾಯಿತು. ಘಟಕದ ಅಧ್ಯಕ್ಷ ಜೆಸಿ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜೆಸಿಐ ಪೂರ್ವಾಧ್ಯಕ್ಷರುಗಳಾದ ಜೇಸಿ ಬಾಬು ಕೆ.ವಿ,ಜೆಸಿ ಭಾಸ್ಕರ ಶೆಟ್ಟಿ ,ಜೆಸಿ ಅಣ್ಣಪ್ಪ ಸಾಸ್ತಾನ, ಜೆಸಿ ಸೋಮಶೇಖರ್, ವಲಯಾಧಿಕಾರಿ ಜೆ.ಸಿ ಜೈಕಿಶನ್, ನಿಕಟಪೂರ್ವಾಧ್ಯಕ್ಷರಾದ ಜೆಸಿ ದಿನೇಶ ಶೆಟ್ಟಿ ಹಾಗೂ ಜೆಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.