ಪುತ್ತೂರು: ಮರೀಲ್ ಪ್ರಗತಿ ಲೇಔಟ್‌ನಲ್ಲಿ ಶಾಸಕರ ಅನುದಾನ ಹಾಗೂ ನಗರಸಭೆ ಅನುದಾನದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ಸೆ.26ರಂದು ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ರವರು ಚಾಲನೆಯನ್ನು ನೀಡಿದರು.

ಚಾಲನೆ ನೀಡಿ ಬಳಿಕ ಸ್ಥಳೀಯ ನಿವಾಸಿ ಸುರೇಶ್ ಕುಮಾರ್ ಮರೀಲ್ ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಂತ ಎನಿಸಿಕೊಳ್ಳಲು ಸುಸಜ್ಜಿತ ರಸ್ತೆ ಇರಬೇಕು, ಬೀದಿ ದೀಪಗಳ ವ್ಯವಸ್ಥೆ ಸರಿ ಇರಬೇಕು, ರಸ್ತೆ ಬದಿ ಗಿಡಮರಗಳಿರಬೇಕು ಎಂಬುದು ಕಲ್ಪನೆ. ಈ ಕಲ್ಪನೆಯನ್ನು ನನಸು ಮಾಡಿಕೊಳ್ಳಲು ಲೇಔಟ್‌ನಂತಹ ಪ್ರದೇಶಗಳು ವ್ಯವಸ್ಥಿತವಾಗಿರಬೇಕು ಎಂಬ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರ ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಸ್ಥಳೀಯ ವಾರ್ಡ್ ಸದಸ್ಯೆ ರೋಹಿಣಿ ಕೇಶವ ಪೂಜಾರಿ, ಲೇಔಟ್ ನಿವಾಸಿ, ಕ್ಯಾಂಪ್ಕೋ ಉದ್ಯೋಗಿ ಸೂರ್ಯ ಕುಮಾರ್ ರವರನ್ನು ಸನ್ಮಾನಿಸಲಾಯಿತು. ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯ ಬಾಲಚಂದ್ರ, ವಾರ್ಡ್ ಬಿಜೆಪಿ ಅಧ್ಯಕ್ಷ ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.






























