ಕರ್ನಾಟಕ ಪೊಲೀಸ್ ನೇಮಕಾತಿ 2021ಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ / ಕಾನ್ ಸ್ಟೇಬಲ್ ನೇಮಕಾತಿ 2021 ರ ಲಿಖಿತ ಪರೀಕ್ಷೆಗೆ 3ನೇ ಬ್ಯಾಚು ಅ.4 ಸೋಮವಾರದಿಂದ ಪ್ರಾರಂಭವಾಗಲಿದೆ.
ಕಳೆದ ಫೆಬ್ರವರಿಯಿಂದ 545 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ತರಬೇತಿಯು ಸೆ.30 ರಂದು ಕೊನೆಗೊಳ್ಳಲಿದ್ದು ಅ.3 ರಂದು ಪರೀಕ್ಷೆ ನಡೆಯಲಿದೆ.
ಪ್ರಸ್ತುತ 402 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ದೈಹಿಕ ಕ್ಷಮತೆಯ ಪರೀಕ್ಷೆ ನಡೆಯಲಿದ್ದು, ನವೆಂಬರ್ ಒಳಗಾಗಿ ಲಿಖಿತ ಪರೀಕ್ಷೆ ನಡೆಯುವ ಸಂಭವವಿದೆ ಮತ್ತು 4000 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಅ.24 ರಂದು ಲಿಖಿತ ಪರೀಕ್ಷೆಯು ನಿಗದಿಯಾಗಿದ್ದು ಲಿಖಿತ ಪರೀಕ್ಷೆಯನ್ನು ಪಾಸಾದವರು ದೈಹಿಕ ಕ್ಷಮತೆಯ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ವಿದ್ಯಾಮಾತ ಅಕಾಡೆಮಿಯು 3ನೇ ಬ್ಯಾಚ್ ನ ತರಬೇತಿಯನ್ನು ಪ್ರಾರಂಭಿಸುತ್ತಿದೆ.
ತರಬೇತಿಯು ಬೆಳಿಗ್ಗೆ 9 ರಿಂದ ಮ.3 ಗಂಟೆ ವರೆಗೆ ನಡೆಯಲಿದ್ದು, ವಿಷಯಾಧಾರಿತವಾಗಿ ತರಗತಿಗಳು ನಡೆಯುತ್ತವೆ. ಅಲ್ಲದೇ ದಿನನಿತ್ಯ ರಾತ್ರಿ 7 ರಿಂದ 9 ರ ವರೆಗೆ ಆನ್ಲೈನ್ ತರಗತಿಗಳು ನಡೆಯುತ್ತವೆ. ವಾರಾಂತ್ಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯ ಪರೀಕ್ಷೆಗಳು ನಡೆಯುತ್ತವೆ. ಅಲ್ಲದೇ ಪ್ರತೀ ವಾರ ಕಾರ್ಯಾಗಾರಗಳು, ಗುಂಪು ಚರ್ಚೆಗಳು, ವಿಶೇಷ ತರಗತಿಗಳ ಮೂಲಕ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಮಾನಸಿಕವಾಗಿ ಸಂಪೂರ್ಣವಾಗಿ ತಯಾರು ಮಾಡಲಾಗುತ್ತದೆ ಎಂದು ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವ ಸಮುದಾಯ ಒತ್ತು ಕೊಡುವುದಿಲ್ಲ ಅನ್ನುವ ಅಭಿಪ್ರಾಯದ ಮಧ್ಯೆ ವಿದ್ಯಾಮಾತ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅದರಲ್ಲೂ ಪೊಲೀಸ್ ನೇಮಕಾತಿಗೆ ಸಂಬಂಧಪಟ್ಟಂತೆ ಉತ್ತಮ ತರಬೇತಿಯನ್ನು ನೀಡುತ್ತಿದ್ದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ವಿದ್ಯಾಮಾತ ಅಕಾಡೆಮಿಯ ಆಡಳಿತ ಮಂಡಳಿಯು ಕೂಡ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು ಈವಾಗಲೇ ಸ್ಟಾಫ್ ಸೆಲೆಕ್ಷನ್ ಕಮಿಷನ್, ಕ್ಯಾಂಪ್ಕೋ, ಕೆಎಮ್ಎಫ್, ಟಿಇಟಿ, ಬ್ಯಾಂಕಿಂಗ್ ತರಬೇತಿಗಳನ್ನು ನೀಡುತ್ತಿದೆ. ಕೆಲವು ದಿನಗಳ ಹಿಂದೆ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯಲ್ಲಿ ಪ್ರಶ್ನೆ ಪತ್ರಿಕೆ – 1 ಮತ್ತು 2 ರಲ್ಲಿ ಅತ್ಯಧಿಕ ಅಂಕಗಳೊಂದಿಗೆ 3 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ವಿದ್ಯಾಮಾತ ಅಕಾಡೆಮಿ, ಒಂದನೇ ಮಹಡಿ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಎಪಿಯಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
ಫೋನ್ ನಂ : 8590773486 / 9148935808 ನ್ನು ಸಂಪರ್ಕಿಸಬಹುದು.