ಪುತ್ತೂರು: ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇರುವ ಮಾಹಿತಿ ದೊರೆತು ಸಾರ್ವಜನಿಕರು ಮನೆಯ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ನಡೆದಿದ್ದು, ಈ ಬಗ್ಗೆ ತಿಳಿಯುತ್ತಿದಂತೆ ಸಾರ್ವಜನಿಕರು ಆತನ ಮನೆ ಮುಂದೆ ಜಮಾಯಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನದ ಅಬೂಬ್ಬಕರ್ ಸಿದ್ದಿಕ್ (24 ) ಎಂಬಾತನ ಮನೆ ಮುಂಭಾಗದಲ್ಲಿ ನಡೆದಿತ್ತು.
ಕೇರಳ – ಕರ್ನಾಟಕ ಗಡಿ ಭಾಗದ ಹಾಗೂ ಕಾಸರಗೋಡು ಜಿಲ್ಲೆಯ ಅದೂರು ಠಾಣಾ ವ್ಯಾಪ್ತಿಗೆ ಈ ಸಿದ್ದಿಕ್ ಎಂಬಾತ ಅಪಹರಿಸಿ ಅಕ್ರಮವಾಗಿ ಕೂಡಿ ಹಾಕಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಆಕೆಯ ತಂದೆ ನೀಡಿದ ದೂರಿನಂತೆ ಅದೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೇ ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನಿನ್ನೆ ಎಫ್.ಐ.ಆರ್ ದಾಖಲಿಸಿದ್ದು ಇಂದು ಯುವತಿ ಮತ್ತು ಆಕೆಯ ತಾಯಿ ಠಾಣೆಗೆ ಆಗಮಿಸಿ ನಾನು ಗೆಳೆತನದಿಂದಾಗಿ ಆತನ ಮನೆಗೆ ತೆರಳಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.
ಯುವತಿಯ ತಂದೆ ನೀಡಿದ ನಾಪತ್ತೆ ದೂರಿನಲ್ಲಿ ಹಾಗೂ ಯುವತಿ ಪೊಲೀಸ್ ತನಿಖೆಯ ವೇಳೆ ತಾನೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಎಂದು ಹೇಳಿದ ಹಿನ್ನಲೆಯಲ್ಲಿ ಆಕೆ ಅಪ್ರಾಪ್ತೆ ಎಂಬ ಶಂಕೆಗೆ ಕಾರಣವಾಗಿತ್ತು. ಆದರೇ ಆಕೆಗೆ ಎಂಟು ವರ್ಷವಾಗಿರುವಾಗ ಆಕೆಯನ್ನು ಶಾಲೆಗೆ ಸೇರಿಸಿದ್ದು ಅಕೆಯ ವಯಸ್ಸಿನ ಬಗ್ಗೆ ಗೊಂದಲ ಉಂಟಾಗಲು ಕಾರಣವಾಗಿತ್ತು. ಯುವಕ ಸಿದ್ದಿಕ್ ಸದ್ಯ ಅದೂರು ಠಾಣೆಯಲ್ಲಿದ್ದಾನೆ. ಇನ್ನೂ ಯುವತಿಯ ನಿರ್ಧಾರದ ಬಗ್ಗೆ ಗೊಂದಲ ಮುಂದುವರಿದಿದ್ದು ಯುವತಿ ತನ್ನ ಪೋಷಕರ ಜತೆ ಯಾ ಯುವಕನ ಜತೆ ತೆರಳುತ್ತಾಳೆಯೇ ಎಂಬ ಕುತೂಹಲ ಹಾಗೇ ಉಳಿದಿದೆ.
ಆಕೆಯನ್ನು ಕಾಸರಗೋಡಿನ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 18 ವರ್ಷ ದಾಟಿರುವ ಕಾರಣ ಅವಳ ಇಷ್ಟದಂತೆ ವ್ಯವಹರಿಸಲು ನ್ಯಾಯಾಲಯ ಆಕೆಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಯುವತಿ ಸಿದ್ಧಿಕ್ ಜೊತೆ ತೆರಳಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದು, ಈ ನಿಟ್ಟಿನಲ್ಲಿ ಸಿದ್ಧಿಕ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ನ್ಯಾಯಾಲಯ ಮುಂಭಾಗ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ನೆರೆದಿದ್ದ ಕಾರಣ ಸದ್ಯ ಯುವತಿ ಪೊಲೀಸರ ಜೊತೆ ಇದ್ದಾಳೆ ಎಂದು ತಿಳಿದು ಬಂದಿದೆ.