ಪುತ್ತೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ನಾಳೆ ನಡೆಯಲಿದ್ದು ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದ ಯುವ ಕಾಂಗ್ರೆಸ್ ನ ಅಭಿಷೇಕ್ ಬೆಳ್ಳಿಪ್ಪಾಡಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.ನನ್ನ ತಂದೆಯ ರಾಜಕೀಯ ಗುರುಗಳಾದಂತಹ ದ.ಕ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರು ಸನ್ಮಾನ್ಯ ಶ್ರೀ ಬಿ ರಮಾನಾಥ ರೈ ಯವರ ಸಲಹೆಯಂತೆ ಮತ್ತು ತನ್ನ ತಂದೆಯವರಾದ ಕೆಪಿಸಿಸಿ ಸದಸ್ಯರು ಆದ ಡಾ|ಬಿ.ರಘು ಅವರ ನಿರ್ದೆಶನದಂತೆ ಹಾಗು ಪಕ್ಷದ ಸಿದ್ಧಾಂತಕ್ಕೆ ತಲೆಬಾಗಿ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.