ನಟ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯಕ್ಕೆ ಕಾಲಿರಿಸಿ ನಾಲ್ಕು ವರ್ಷಗಳಾಗಿತ್ತು. ಇಂತಹ ಸ್ಟಾರ್ ನಟರ ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ ಕಂಡಿದೆ.
ನಟರಾದ ಸಮಂತಾ ಮತ್ತು ನಾಗ ಚೈತನ್ಯ ಅವರು ಅಧಿಕೃತವಾಗಿ ವಿವಾಹ ವಿಚ್ಛೇದನ ಹೊಂದಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾತನಾಡಿದ ನಾಗ ಚೈತನ್ಯ, ಸಾಕಷ್ಟು ಚರ್ಚೆ ಮತ್ತು ಆಲೋಚನೆಯ ನಂತರ, ಸ್ಯಾಮ್ ಮತ್ತು ನಾನು ನಮ್ಮ ಸ್ವಂತ ಮಾರ್ಗಗಳನ್ನು ಅನುಸರಿಸಲು ಗಂಡ ಮತ್ತು ಹೆಂಡತಿಯಾಗಿ ಬೇರ್ಪಡಲು ನಿರ್ಧರಿಸಿದ್ದೇವೆ.
ನಮ್ಮ ಸಂಬಂಧದ ತಿರುಳಾಗಿರುವ ಒಂದು ದಶಕದ ಸ್ನೇಹವನ್ನು ಹೊಂದಿರುವುದು ನಮ್ಮ ಅದೃಷ್ಟ, ಅದು ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ತಿಳಿಸಿದ್ದಾರೆ.
ಅಂದಹಾಗೇ 2017ರಲ್ಲಿ ನಟ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಂತ ಸ್ಟಾರ್ ನಟ ನಾಗ ಚೈತನ್ಯ ಹಾಗೂ ಸಮಂತಾ ಇದೀಗ ವಿವಾಹ ವಿಚ್ಛೇದನಗೊಂಡಿದ್ದಾರೆ.