ಮಂಗಳೂರು: ಅನ್ಯಕೋಮಿನ ಯುವಕನೊಂದಿಗೆ ಪತ್ತೆಯಾದ ಹಿಂದೂ ಯುವತಿಯರನ್ನು ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುಪುರದ ಚಿಲಿಂಬಿ ಗುಡ್ಡೆ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಓರ್ವ ಹಿಂದೂ ಯುವಕನಿದ್ದು, ಆತನೊಂದಿಗೆ ಅನ್ಯಕೋಮಿನ ಯುವಕ ಹಾಗೂ ಇಬ್ಬರು ಹಿಂದೂ ಯುವತಿಯರು ಪತ್ತೆಯಾಗಿದ್ದಾರೆ. ಇವರು ಬಳಸಿದ್ದ ಕಾರ್ ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಸಂಶಯಕ್ಕೀಡು ಮಾಡಿಕೊಟ್ಟಿದ್ದು ಇದೀಗ ನಾಲ್ವರನ್ನೂ ಬಜ್ಪೆ ಪೋಲಿಸ್ ಠಾಣೆಯ ಪೋಲಿಸರಿಗೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.