ಪುತ್ತೂರು: ಕೊಳ್ತಿಗೆ ಗ್ರಾಮ ಕಟ್ಟಪುಣಿ ಕುಟುಂಬದ ಪುತ್ತೂರಿನ ಮುಖ್ಯ ರಸ್ತೆಯ ಜೆ.ಎಮ್. ಬಿಲ್ಡಿಂಗ್ ನಲ್ಲಿರುವ ಇಲೆಟ್ರೋನಿಕ್ ರಿಪೇರಿ ಶಾಪ್ ನ ಮಾಲಕ ಜೈ ದೀಪ್(56) ಹೃದಯಾಘಾತದಿಂದಾಗಿ ಅ.3 ರಂದು ನಿಧನರಾದರು.
ನಿನ್ನೆ ಹೃದಯಾಘಾತವಾದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಜೈ ದೀಪ್ ರವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಪ್ರಮೀಳಾ, ಮಕ್ಕಳಾದ ಧನುಷ್, ಹಿಮಾಂಶು ರನ್ನು ಅಗಲಿದ್ದಾರೆ.



























