ಬೆಳ್ತಂಗಡಿ: ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ (60) ಎಂದು ಗುರುತಿಸಲಾಗಿದೆ.
ಸಂಜೀವ ಶೆಟ್ಟಿ ಯವರನ್ನು ಕಡಿದು ಕೊಲೆ ಮಾಡಲಾಗಿದೆ. ಇವರು ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಇವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ಇಂದು ಬೆಳಗ್ಗೆ ತಡವಾದರೂ ಸಂಜೀವ ಅವರು ಏಕೆ ಬಂದಿಲ್ಲವೆಂದು ಅವರ ಮನೆ ಬಳಿ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಘಟನೆಗೆ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ. ವೇಣೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.