ಪುತ್ತೂರು: ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು ಮಳಿಗೆಯಲ್ಲಿ ‘ಪ್ರಾಚಿ ಆ್ಯಂಟಿಕ್ ಕಲೆಕ್ಷನ್’ ಪಾರಂಪರಿಕ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹವನ್ನು ಅ.08 ರಂದು ಬಿಡುಗಡೆ ಮಾಡಲಾಯಿತು.
ನೂತನ ‘ಪ್ರಾಚಿ ಆ್ಯಂಟಿಕ್ ಕಲೆಕ್ಷನ್’ ವಿಭಾಗವನ್ನು ಪುತ್ತೂರಿನ ಖ್ಯಾತ ವೈದ್ಯ ದಂಪತಿ ಡಾ. ಚಂದ್ರಶೇಖರ್ ರಾವ್ ಮತ್ತು ಡಾ. ಪೂರ್ಣ ಸಿ. ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಡಾ. ಪೂರ್ಣ ಸಿ. ರಾವ್ ಮಾತನಾಡುತ್ತಾ, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ರವರ ವಿನೂತನ ಪ್ರಯೋಗ ‘ಪ್ರಾಚಿ’ ಮತ್ತು ‘ಗ್ಲೋ’ ಬ್ರಾಂಡ್ ಗಳಿಗೆ ಹೆಚ್ಚು ಹೆಚ್ಚು ಗ್ರಾಹಕರು ಬರಲಿ. ಮೊದಲಿನಿಂದಲೂ ಜಿ.ಎಲ್. ಮಳಿಗೆಯಲ್ಲಿ ಹೊಸ ಹೊಸತು ಸಿಗುತ್ತದೆ ಎಂಬ ಮನಸ್ಸಿನ ಭಾವನೆಗೆ ಇನ್ನಷ್ಟು ‘ಗ್ಲೋ’ ನೀಡಿ ಪ್ರಾಚೀನ ಕಲೆಗೆ ಹೊಸ ಅರ್ಥ ಕೊಡುತ್ತಿರುವ ಜಿ. ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗೆ ಶುಭವಾಗಲಿ ಎಂದರು.
ಸಮಾರಂಭದಲ್ಲಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮುಖ್ಯಸ್ಥರಾದ ಬಲರಾಮ ಆಚಾರ್ಯ, ಪಾಲುದಾರರಾದ ಸುಧನ್ವ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ನಂದಿತಾ ವಿಜೇಶ್ ಉಪಸ್ಥಿತರಿದ್ದರು. ವೇದಾ ಲಕ್ಷ್ಮೀಕಾಂತ್ ಹಾಗೂ ಮೇಘ ಸುಧನ್ವ ಸ್ವಾಗತಿಸಿದರು.