ಕಡಬ: ಗದ್ದೆಯ ಬದಿಯಲ್ಲಿ ಹಾದು ಹಾದುಹೋಗುತ್ತಿದ್ದಾಗ ಆಕಸ್ಮಿಕ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಇಚಿಲಂಪಾಡಿಯಲ್ಲಿ ನಡೆದಿದೆ.
ಮೃತರನ್ನು ಬಿಜೇರು ನಿವಾಸಿ ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ.
ಗುರುವಾರ ನಾರಾಯಣ ಶೆಟ್ಟಿಯವರು ಗದ್ದೆಯ ಬದಿಯಲ್ಲಿ ಹಾದು ಹೋಗುತ್ತಿದ್ದಾಗ ಯಾವುದೋ ವಿಷಕಾರಿ ಹಾವು ಕಡಿದ ಅನುಭವವಾಗಿದೆ. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಯುರ್ವೇದಿಕ್ ಪಂಡಿತರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಗಾಯ ಉಲ್ಬಣಿಸಿ ರಕ್ತ ಸ್ರಾವ ಉಂಟಾದ ಕಾರಣ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭ ದಾರಿ ಮದ್ಯೆಯೇ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.