ಪುತ್ತೂರು: ಗೋಳಿಕಟ್ಟೆ ಬಾಲವನ ಸಮೀಪದ ನಿವಾಸಿ ಫಿಲೋಮಿನಾ ಫ್ರೌಡ ಶಾಲಾ ನಿವೃತ್ತ ಅಧ್ಯಾಪಕ ಜೋಸೆಫ್ ಡಿಮೊಲ್ಲೊ(61) ರವರು ಹೃದಯಾಘಾತದಿಂದಾಗಿ ಅ.10 ರಂದು ನಿಧನರಾದರು.
ಜೋಸೆಫ್ ಫಿಲೋಮಿನಾ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪುತ್ತೂರು ತಾಲೂಕಿನ ಪರ್ಲಡ್ಕ ಎಂಬಲ್ಲಿ ಡೆನ್ನಿಸ್ ಡಿ’ಮೆಲ್ಲೋ ಹಾಗೂ ಮೇರಿ ಲೋಬೋ ದಂಪತಿಯ ಏಳು ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದ ಜೋಸೆಫ್ ಡಿ’ಮೆಲ್ಲೋರವರು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿದ್ದು, 2021 ರ ಎ.30 ರಂದು ನಿವೃತ್ತರಾಗಿದ್ದರು.
ಜೋಸೆಫ್ ಡಿ’ಮೆಲ್ಲೋರವರು `ಜ್ಯೋ’ ಡಿ’ಮೆಲ್ಲೋ ಎಂದೇ ಎಲ್ಲರಿಗೂ ಚಿರಪರಿತರಾಗಿದ್ದರು.
ಮಾಯಿದೆ ದೇವುಸ್ ಚರ್ಚ್ನ ಪಾಲನಾ ಸಮಿತಿಯ ಕಾರ್ಯದರ್ಶಿಯಾಗಿ, ಸದಸ್ಯರಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ, ಡೊನ್ ಬೊಸ್ಕೊ ಕ್ಲಬ್ನ ಮಾಸ ಪತ್ರಿಕೆ ಪುತ್ತೂರ್ಚೆ ನೆಕೆತ್ರ್’ ಹಾಗೂ ಮಾಯಿದೆ ದೇವುಸ್ ಚರ್ಚ್ನ ಪತ್ರಿಕೆಆವಯ್’ನಲ್ಲಿ ಪುಟ ವಿನ್ಯಾಸಕಾರರಾಗಿ ಸೇವೆಯನ್ನು ನೀಡಿರುತ್ತಾರೆ.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.






























