ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಮಾಜಿ ಸಂಸದ ಉಗ್ರಪ್ಪ ನಡುವೆ ನಡೆದ ಸಂಭಾಷಣೆ ಇದಾಗಿದೆ. ಈ ಸಂಭಾಷಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಕಲೆಕ್ಷನ್ ಗಿರಾಕಿ’ ಎಂದು ಸಲೀಂ ಅವರು ಹೇಳಿದ್ದಾರೆ.
ಮಾಧ್ಯಮ ಗೋಷ್ಠಿ ಆರಂಭಕ್ಕೆ ಮುನ್ನ ಸಲೀಂ ಅವರು ಇನ್ನೊಬ್ಬ ನಾಯಕ ಉಗ್ರಪ್ಪ ಜತೆ ನಡೆಸಿದ ಪಿಸು ಮಾತಿನ ಸಂಭಾಷಣೆ ಇದೀಗ ವೈರಲ್ ಆಗಿದೆ.
ಕೆಪಿಸಿಸಿ ಅಧ್ಯಕ್ಷರ ಕಾರ್ಯ ವೈಖರಿ ಮತ್ತು ಅವರ ಸಂಪತ್ತಿನ ಬಗ್ಗೆ ಸಲೀಂ ಪ್ರಸ್ತಾಪಿಸಿದ್ದಾರೆ. ಡಿ ಕೆ ಶಿವಕುಮಾರ್ ‘ಹುಡುಗರ ಬಳಿ ನೂರು ಕೋಟಿ ರೂಪಾಯಿ ಇದೆ’. ಹೀಗಿರುವಾಗ ಡಿ ಕೆ ಶಿವಕುಮಾರ್ ಬಳಿ ಎಷ್ಟು ಹಣ ಇರಬಹುದು ಎಂಬ ರೀತಿಯಲ್ಲಿ ಸಲೀಂ ಮಾತನಾಡಿದ್ದಾರೆ. ಇದೀಗ ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಸಲೀಂ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ.