ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿ ನೇಮಕಗೊಂಡಿರುವ ಧೋನಿ, ಸುಮಾರು ಒಂದು ತಿಂಗಳ ಕಾಲ ಕೊಹ್ಲಿ ಪಡೆಯ ಯಶಸ್ಸಿಗಾಗಿ ಶ್ರಮಿಸಲಿದ್ದಾರೆ.
ಆದ್ರೆ ಧೋನಿ, ಈ ಅವಧಿಯಲ್ಲಿ ಹಣ ಪಡೆಯದೆ ತಂಡದ ಪರ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಮಾಹಿತಿ ನೀಡಿದ್ದು, ಟೀಮ್ ಇಂಡಿಯಾದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿರುವ ಧೋನಿ, ಇದಕ್ಕಾಗಿ ಯಾವುದೇ ಹಣ ಪಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಧೋನಿಯ ಈ ಹೃದಯ ವೈಶಾಲ್ಯತೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ..! ಸೋಶಿಯಲ್ ಮೀಡಿಯಾದಲ್ಲಿ ಧೊನಿಯನ್ನ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.