ಕಾಸರಗೋಡು: ಕೇರಳವನ್ನೇ ಬೆಚ್ಚಿ ಬೀಳಿಸಿದ್ದ ಪತಿಯೇ ಪತ್ನಿಯ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೂರಜ್ ಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಅಂಗವಿಕಲೆಯಾಗಿದ್ದ ಪತ್ನಿಯನ್ನು ಹಾವು ಕಚ್ಚಿಸಿ ಆರೋಪಿ ಸೂರಜ್ ಕೊಂದಿದ್ದ. ಸೂರಜ್ ನ ಎಲ್ಲಾ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿಲಾಗಿದೆ. ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಅಂಗವಿಕಲೆಯಾಗಿದ್ದ ಪತ್ನಿ ಉತ್ರಾ(25)ಳನ್ನು ಆರೋಪಿ ಪತಿ ಕೊಲೆಗೈದಿದ್ದ. ವಿಷಕಾರಿ ನಾಗರಹಾವಿನಿಂದ ಕಚ್ಚಿಸಿ ಕೊಲೆಗೈಯ್ಯಲಾಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಕೊಲೆ ನಡೆದಿತ್ತು. ಕೊಲೆ ಯತ್ನದ ಅಪರಾಧಕ್ಕಾಗಿ ಆರೋಪಿ ಸೂರಜ್ ಗೆ ಜೀವಾವಧಿ ಶಿಕ್ಷೆಯಾಗಿದ್ದು, ವಿಷ ನೀಡಿದ್ದಕ್ಕೆ 10 ವಷ ಹಾಗೂ ಸಾಕ್ಷ್ಯ ನಾಶಕ್ಕೆ 7ವರ್ಷ ಶಿಕ್ಷೆ ನೀಡಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೋಜ್ ಎಂ. ಶಿಕ್ಷೆ ಪ್ರಕಟಿಸಿದ್ದಾರೆ.


























