ಸುಬ್ರಹ್ಮಣ್ಯ : ಚಲಿಸುತ್ತಿದ ಬೈಕ್ ಮೇಲೆ ಕಡವೆ ಜಿಗಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಅ. 16 ರಂದು ನಡೆದಿದೆ.


ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬ ರಸ್ತೆಯಲ್ಲಿ ರಾಮಚಂದ್ರ ಅರ್ಬಿತ್ತಾಯ (50 ವ) ಎಂಬವರು ತನ್ನ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಮಯಕ್ಕೆ ಕಾಡಿನೊಳಗಿಂದ ರಸ್ತೆ ದಾಟುತ್ತಿದ್ದ ಕಡವೆಯೊಂದು ಅಡ್ಡಸಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಟಲ್ ಆಡಿ ತನ್ನ ಮನೆಗೆ ವಾಪಾಸಾಗುತ್ತಿದ್ದ ಸಮಯದಲ್ಲಿ ಘಟನೆ ನಡೆದಿದ್ದು, ಸಹಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.