ಪುತ್ತೂರು: ದೇಶದ ಜನರಿಗೆ ಅಚ್ಚೇ ದಿನ ತರುತ್ತೇನೆ ಎಂಬ ಸುಳ್ಳು ಭರವಸೆ ನೀಡಿ 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರದ ಜನವಿರೋಧಿ ನೀತಿಯು ಜನಸಾಮಾನ್ಯ ರಿಗೆ ಇವತ್ತು ಅಚ್ಚೇ ದಿನ ಬದಲು ನರಕ್ ದಿನ ವಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಹೇಳಿದರು.
ಅವರು ನಗರದ ವ್ಯಾಪ್ತಿಯ ಮೊಟ್ಟೆತ್ತಡ್ಕ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿಯೊಬ್ಬ ಬಡವನಿಗೆ 7 ಕೆಜಿ ಉಚಿತ ವಾಗಿ ಅಕ್ಕಿ ನೀಡುತ್ತಿದ್ದರು. ಈಗ ಬಿಜೆಪಿ ಸರಕಾರ 2 ಕೆಜಿ ಕಡಿತಗೊಳಿಸಿ 5 ಕೆಜಿ ಅಕ್ಕಿ ನೀಡುತ್ತಿದೆ. ಕೇವಲ 5 ಕೆಜಿ ಅಕ್ಕಿ ನೀಡಿ ದೇಶದಾದ್ಯಂತ ಪೆಟ್ರೋಲ್ ಬಂಕ್ ನಲ್ಲಿ 5 ಕೆಜಿ ಅಕ್ಕಿ ನೀಡಿದ ಮೋದಿ ಎಂದು ಪ್ರಧಾನಿ ಮೋದಿಯ ಫೋಟೋ ಇರುವ ಬೋರ್ಡ್ ಹಾಕಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ.
ಈ ರೀತಿ ಪ್ರಚಾರಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಈ ಹಣದಲ್ಲಿ ಪ್ರತಿಯೊಬ್ಬ ನಿಗೆ 25 ಕೆ ಜಿ ಅಕ್ಕಿ ನೀಡಬಹುದಿತ್ತು ಎಂದರು.
ಕಾಂಗ್ರೆಸ್ ಸರಕಾರವಿದ್ದಾಗ 5 ಪೈಸೆ ಬೆಲೆ ಏರಿದಾಗ ಪ್ರತಿಭಟಿಸಿ ರಾಜಕೀಯ ಮಾಡುತ್ತಿದ್ದ ಬಿಜೆಪಿಯವರು ಈಗ ತನ್ನ ಅಧಿಕಾರದಲ್ಲಿ ಜನ ದಿನನಿತ್ಯ ಬಳಸುವ ಆಹಾರ ಸಾಮಗ್ರಿಗಳಿಗೆ ವಿಪರೀತ ಬೆಲೆ ಏರಿಸಿ ಜನಸಾಮಾನ್ಯರ ಬದುಕನ್ನು ನರಕ ಮಾಡಿರುತ್ತಾರೆ. ಜನರ ಭಾವನೆಗಳಿಗೆ ಕಿಂಚಿತು ಗೌರವ ಗೊಡದ ಬಿಜೆಪಿ ಸರಕಾರ ದೇಶದ ಶ್ರೀಮಂತರ ಹಿತ ಕಾಪಾಡುವ ಬಂಡವಾಳ ಶಾಹಿಗಳ ಸರಕಾರವಾಗಿರುತ್ತದೆ ಎಂದು ಹೇಳಿದರು.
ನಗರ ಸಭೆಯ ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ ಮಾತನಾಡಿ, ಕೆಮ್ಮಿಂಜೆ ಗ್ರಾಮದ ಸರ್ವಾಂಗಿನ ಅಭಿವೃದ್ಧಿಗೆ ಮೂಲಕಾರಣರಾಗಿರುವ ಮಹಮ್ಮದ್ ಆಲಿ ಯವರ ನೇತ್ರತ್ವದಲ್ಲಿ ನಗರದಲ್ಲಿ ಕಾಂಗ್ರೆಸ್ ಸಂಘಟನೆ ಕೆಲಸ ನಡೆಯುತ್ತಿದೆ. ನಗರ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಒಂದು ತಂಡವಾಗಿ ಕೆಲಸ ಮಾಡಲಿದ್ದೇವೆ. ಹೆಚ್ಚಿನ ಕಾಲೋನಿಗಳಲ್ಲಿ ಸ್ಥಳದ ದಾಖಲೆ ಬಗ್ಗೆ ಸಮಸ್ಯೆ ಇದೆ, ಹಿರಿಯರ ಹೆಸರಲ್ಲಿರುವ ಭೂಮಿ ಧಾಖಲೆಯನ್ನು ವಾರೀಸ್ ಹಕ್ಕುಗಳ ಮೂಲಕ ಅವರ ಅವರ ಹೆಸರಲ್ಲಿ ಮಾಡುವಲ್ಲಿ ನಾವೆಲ್ಲಾ ಶ್ರಮ ವಹಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯೆ ಶೈಲಾ ಪೈ, ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಯುವ ನಾಯಕ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ವಿಜಯಲಕ್ಷ್ಮಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸುರೇಶ ಪೂಜಾರಿ ಮೊಟ್ಟೆತಡ್ಕ,, ಸುರೇಂದ್ರ ಮೊಟ್ಟೆತಡ್ಕ,ಶೀನ ಮೊಟ್ಟೆತಡ್ಕ ರಾಜು ಮೊಟ್ಟೆತಡ್ಕ, ಸತೀಶ ಮೊಟ್ಟೆ ತಡ್ಕ ಬೂತ್ ಅಧ್ಯಕ್ಷ ರವೀಂದ್ರ ರೈಬ್ಲಾಕ್ ಕಾರ್ಮಿಕ ಘಟಕದ ಪಧಾಧಿಕಾರಿ ಅಬ್ದುಲ್ಲ ಕುನ್ನಿ ಮೊಟ್ಟೆ ತಡ್ಕ, ಈಸುಬು ಮೊಟ್ಟೆತಡ್ಕ ಸಹಿತ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ರಫೀಕ್ ಮೊಟ್ಟೆತಡ್ಕ ಸ್ವಾಗತಿಸಿ,ಬ್ಲಾಕ್ ಎಸ್ ಸಿ ಘಟಕದ ಕೋಶಾಧಿಕಾರಿ ಸಂದೀಪ್ ಮೊಟ್ಟೆತಡ್ಕ ವಂದಿಸಿದರು.