ಸುಳ್ಯ : ಸುಳ್ಯ ದ ಶಾಸಕ ಅಂಗಾರ ಸಚಿವರಾದ ಮೇಲು ತಮ್ಮ ರಸ್ತೆ ಬದಿಯ ಸಣ್ಣ ಹೋಟೆಲ್ ಒಂದರಲ್ಲಿ ಚಾ ತಿಂಡಿ ತಿನ್ನುವ ಮೂಲಕ ಸರಳತೆಯನ್ನು ತೋರಿಸಿ ಕೊಟ್ಟಿದ್ದಾರೆ.
ಸೋಮವಾರ ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಸಚಿವರು ಮಂಗಳೂರಿನಿಂದ ತಮ್ಮ ಸರಕಾರಿ ವಾಹನದಲ್ಲಿ ಬರುವಾಗ ಪುತ್ತೂರು ಸುಳ್ಯ ಗಡಿಭಾಗದ ರಸ್ತೆ ಬದಿಯ ಗೂಡು ಹೊಟೆಲ್ ಒಂದರಲ್ಲಿ ಕಲ್ತಪ್ಪ ತಿಂದು ಚಾ ಕುಡಿದು ತಮ್ಮ ನಿವಾಸಕ್ಕೆ ಆಗಮಿಸಿದರು.