ವಿಟ್ಲ: ಪುಣೆ ಹಿರಿಯ ಯಕ್ಷಗಾನ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ, ಮೂಲತಃ ವಿಟ್ಲ ನಿವಾಸಿ ವಾಸು ಕುಲಾಲ್ ರವರು ಅ.18 ರಂದು ರಾತ್ರಿ ಹೃದಯಾಘಾತದಿಂದಾಗಿ ನಿಧನರಾದರು.
ವಾಸು ಕುಲಾಲ್ ರವರು ನಾಟಕ, ಯಕ್ಷಗಾನ ಕಲಾವಿದರಾಗಿ ಸರಳ, ಸನ್ನಡತೆಯ ವ್ಯಕ್ತಿತ್ವದಿಂದ ಜನರ ಮೆಚ್ಚುಗೆ ಪಾತ್ರರಾಗಿದ್ದರು.
ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.


























