ಪುತ್ತೂರು: ಅಸುಪಾಸಿನಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿರುವ ಅಬುತಾಹಿರ್(21) ಕಾಣೆಯಾಗಿದ್ದಾರೆ ಎಂದು ಆತನ ತಂದೆ ಪುತ್ತೂರು ನಗರಠಾಣೆಯಲ್ಲಿ ದೂರು ನೀಡಿದ್ದಾರೆ.
ಸುಮಾರು 8 ವರ್ಷಗಳಿಂದ ಪುತ್ತೂರಿನ ಅಸುಪಾಸಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಅಬುತಾಹಿರ್ 20 ದಿನಗಳಿಂದ ಪುತ್ತೂರಿನ ನರಿಮೊಗರು ಎಂಬಲ್ಲಿ ಗಾರೆ ಕೆಲಸ ಮಾಡುತ್ತಿದ್ದು, ಅ.15 ರಂದು ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಹುಡುಕಿ ಕೊಡುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಹೆಸರು : ಅಬುತಾಹಿರ್
ವಯಸ್ಸು : 21
ಕೂದಲು : ಕಪ್ಪು
ಮೈ ಬಣ್ಣ : ಎಣ್ಣೆ ಕಪ್ಪು
ಎತ್ತರ : 5 ಅಡಿ
ಮೈ ಕಟ್ಟು : ಸಾಧಾರಣ
ಧರಿಸಿದ್ದ ಉಡುಪು: ನೀಲಿ ಬಣ್ಣದ ಟೀ ಶರ್ಟ್, ಬಿಳಿ ಹಾಗೂ ನೀಲಿ ಬಣ್ಣದ ಚೌಕುಳಿ ಗೆರೆಗಳಿರುವ ಲುಂಗಿ ಧರಿಸಿರುತ್ತಾನೆ.
ಮಾತಾಡುವ ಭಾಷೆ : ಬಂಗಾಳಿ, ಹಿಂದಿ
ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪುತ್ತೂರು ನಗರ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.