ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊ0ದಾದ ಸಂತ ಫಿಲೋಮಿನ ಕಾಲೇಜಿನ ಸಾಧನಾ ಶಿಖರಕ್ಕೆ ಮತ್ತೊಂದು ಕಿರೀಟ ಎನ್ನುವಂತೆ ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ಇದೇ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ , ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ಆಗಿಒರುವ ರಕ್ಷಾ ಅಂಚನ್‌ರವರು ಆಯ್ಕೆಯಾಗಿರುತ್ತಾರೆ.
ಈಗಾಗಲೇ ಫಿಲೋಮಿನಾ ಕಾಲೇಜಿನಿಂದ ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಅವಲೋಕಿಸಿದರೆ, ಆರು ಮಂದಿ ಕೆಡೆಟ್‌ಗಳು ಮಾತ್ರವಲ್ಲದೇ ಎನ್‌ಸಿಸಿ ಅಧಿಕಾರಿ ಸೇರಿದಂತೆ ಏಳು ಮಂದಿಗೆ ಪ್ರತಿಷ್ಠಿತ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಬಂದಿತ್ತು. 2017-18ರಲ್ಲಿ ರಚನಾ ಹಾಗೂ ಬ್ರಾö್ಯಂಡನ್, 2018-19ರಲ್ಲಿ ಜೊವಿನ್ ಜೋಸೆಫ್, 2019-20ರಲ್ಲಿ ಚೇತನ್ ಹಾಗೂ ಮಹಾಲಸಾ ಪೈ, ಪ್ರಸಕ್ತ ವರ್ಷದಲ್ಲಿ ರಕ್ಷಾ ಅಂಚನ್ ಆಯ್ಕೆಯಾಗಿದ್ದು ಕಾಲೇಜಿನ ಕೀರ್ತಿಯನ್ನು ಇಮ್ಮಡಿಗೊಳಿಸಿದೆ. ಇದರ ಜೊತೆಗೆ ಕಳೆದ ವರ್ಷ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರು ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟಿನ ಕಂಟಿ0ಜೆ0ಟ್ ಅಧಿಕಾರಿಯಾಗಿ ಪೆರೇಡಿನಲ್ಲಿ ಭಾಗವಹಿಸಿದ್ದರು.
ಭಾರತದಲ್ಲಿ ಒಟ್ಟು 17 ಡೈರಕ್ಟರೇಟ್ ಎನ್ ಸಿಸಿ ಘಟಕಗಳಿದ್ದು ಅದರಲ್ಲಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್ ಕೂಡಾ ಒಂದು. ವಿವಿಧ ಭಗಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹತ್ತು ಮಂದಿಯಲ್ಲಿ ಮಂಗಲೂರು ತಂಡದ 19 ಕರ್ಣಾಟಕ ಬೆಟಾಲಿಯನ್ ಎನ್‌ಸಿಸಿಯಲ್ಲಿ ರಕ್ಷಾ ಅಂಚನ್ ಕೂಡಾ ಒಬ್ಬರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸುತ್ತಿರು ಏಕೈಕ ವಿದ್ಯಾರ್ಥಿನಿ ಇವರು ಎನ್ನುವುದೇ ಎಲ್ಲರಿಗೂ ಹೆಮ್ಮೆಯ ವಿಚಾರ.