ಪುತ್ತೂರು: ಜೂನಿಯರ್ ಕಾಲೇಜಿನ ಕೊಂಬೆಟ್ಟು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಬೇಕಂತಲೇ ಯಾರೋ ಅಪರಿಚಿತರು ದ್ವಿಚಕ್ರ ವಾಹನದಿಂದ ಗುದ್ದಿ, ಕೈ ಮತ್ತು ಹೆಲ್ಮೆಟ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಇಬ್ಬರು ಪಾದಚಾರಿಗಳು ಆಸ್ಪತ್ರೆಗೆ ದಾಖಲಾಗಿ, ಠಾಣೆಗೆ ದೂರು ನೀಡಿದ ಘಟನೆ ಅ.21 ರಂದು ನಡೆದಿದೆ.
ಹಲ್ಲೆಗೊಳಗಾದವರನ್ನು ಸಾಲ್ಮರ ನಿವಾಸಿಗಳಾದ ಮಹಮ್ಮದ್ ಜಿಯಾದ್ ಮತ್ತು ಮಹಮ್ಮದ್ ಇಜಾಜ್ ಎಂದು ಗುರುತಿಸಲಾಗಿದೆ. ಓರ್ವ ಕಾಲೇಜು ವಿದ್ಯಾರ್ಥಿ ಎನ್ನಲಾಗಿದೆ.
ಅ.21 ರಂದು ಕೊಂಬೆಟ್ಟು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ದ್ವಿ ಚಕ್ರ ವಾಹನದಲ್ಲಿ ಬಂದು ಡಿಕ್ಕಿ ಹೊಡೆದಿದ್ದು, ನಂತರ ವಾಹನ ಸವಾರರು ಇಬ್ಬರು ಕೈ ಮತ್ತು ಹೆಲ್ಮೆಟ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾದ ಇಬ್ಬರು ಪಾದಚಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು,ಪುತ್ತೂರು ನಗರ ಠಾಣಾ ಪೊಲೀಸರು ದೂರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ತಿಳಿದು ಬಂದಿದೆ.