ಮಂಗಳೂರು: ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂನಿಯತ್ತಾಗಿ ಮತ್ತು ಪರಿಪೂರ್ಣವಾಗಿ ಅನುಸರಿಸಬೇಕು.ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಸಾಮಾನ್ಯ ರಸ್ತೆಪ್ರಜ್ಞೆ ಬೆಳೆಸಿಕೊಳ್ಳಬೇಕು. ಹೆಚ್ಚಿನ ಎಲ್ಲಾ ರಸ್ತೆ ಅಪಘಾತಗಳು ಮದ್ಯಪಾನ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಉಂಟಾಗುತ್ತದೆ.
ಈ ನಿಟ್ಟಿನಲ್ಲಿ ಜನರಲ್ಲಿ ರಸ್ತೆ ನಿಯಮಗಳಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾಯ್ಯತೆ ಇದೆ ಎಂದುದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.ಶುಕ್ರವಾರದಂದು ಜಿಲ್ಲಾ ಗೃಹರಕ್ಷಕ ದಳದ ಕಛೇರಿಮೇರಿಹಿಲ್ ಇಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಮತ್ತುತಿಂಗಳು ಇದರ ಅಂಗವಾಗಿ ದ.ಕ. ಜಿಲ್ಲಾ ಗೃಹರಕ್ಷಕ ದಳ,ಪೌರರಕ್ಷಣಾ ದಳ, ಲಯನ್ಸ್ ಕ್ಲಬ್ ಮೆಟ್ರೋಗೋಲ್ ಮತ್ತುಲಯನ್ಸ್ ಕ್ಲಬ್ ಮಂಗಳೂರು ತ್ರಿವೇಣಿ ಇದರ ಸಂಯುಕ್ತಆಶ್ರಯದಲ್ಲಿ ರಸ್ತೆ ಸುರಕ್ಷಾ ಅಭಿಯಾನ ಇದರ ಉದ್ಘಾಟನಾಸಮಾರಂಭ ನಡೆಯಿತು.
ರಸ್ತೆ ಸುರಕ್ಷಾ ನಿಯಮಗಳನ್ನು ಎಚ್ಚರಿಸುವ ಸುಮಾರು೫೦೦೦ ಕರಪತ್ರಗಳನ್ನು ನಗರದೆಲ್ಲೆಡೆ ಹಂಚುವಉದ್ದೇಶದಿಂದ ಇದೇ ಸಂದರ್ಭದಲ್ಲಿ ಬಿಡುಗಡೆಮಾಡಲಾಯಿತು. ಕರಪತ್ರ ಬಿಡುಗಡೆ ಮಾಡಿ ಮಾತನಾಡಿದಶ್ರೀ ಜೆ.ಕೆ. ಹರಿಪ್ರಸಾದ್ ಇವರು ಮಾತನಾಡಿ ರಸ್ತೆ ಸುರಕ್ಷತಾನಿಯಮವನ್ನು ಅನುಷ್ಠಾನಕ್ಕೆ ತರುವಲ್ಲಿ ಗೃಹರಕ್ಷಕರ ಪಾತ್ರಬಹಳ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿಶಾಲಿನಿ ಸುವರ್ಣ ಅಧ್ಯಕ್ಷರು, ಮಂಗಳೂರು, ತ್ರಿವೇಣಿ, ಶಿಲ್ಪಮತ್ತು ಮೀರಾ ಲಯನ್ಸ್ ಕ್ಲಬ್ ತ್ರಿವೇಣಿ ಸದಸ್ಯರು, ರಂಜಿತ್ಶೆಟ್ಟಿ, ಲಯನ್ಸ್ ಮೆಟ್ರೋಗೋಲ್ ಮೆಂಬರ್ಉಪಸ್ಥಿತರಿದ್ದರು. ಕಛೇರಿ ಸಿಬ್ಬಂದಿಗಳಾದ ರತ್ನಾಕರ್,ಅನಿತಾ ಉಪಸ್ಥಿತರಿದ್ದರು. ಹಿರಿಯ ಗೃಹರಕ್ಷಕರಾದ ಸುನಿಲ್ಕುಮಾರ್, ದಿವಾಕರ್, ಮಹೇಶ್, ರಾಜಶ್ರೀ, ಸುನಿಲ್ಪೂಜಾರಿ, ಶಿವಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.ಗೃಹರಕ್ಷಕರಾದ ರಕ್ಷಿತ್ ಅಡಪ್ಪ ಇವರು ವಂದಿಸಿದರು.ಸುಮಾರು 30 ಮಂದಿ ಗೃಹರಕ್ಷಕರು ಉಪಸ್ಥಿತರಿದ್ದರು.