ಬೆಳ್ತಂಗಡಿ: ಯುವತಿಯೋರ್ವಳು ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ಅ.25 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ರಾಮ ಎಂಬವರ ಮಗಳಾದ ರೇಣುಕಾ(21) ನಾಪತ್ತೆಯಾದ ಯುವತಿ.
ರೇಣುಕಾ ಒಂದು ವರ್ಷದಿಂದ ಕ್ಲಿನಿಕ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಆಕೆಯ ಆರೈಕೆಗಾಗಿ ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿಯೇ ಇದ್ದಳು.
ಅ.25 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ, ಯಾರಿಗೂ ಹೇಳದೆ ಹೊರ ಹೋಗಿದ್ದು, ಅಷ್ಟೇ ಅಲ್ಲದೇ ಕರೆ ಮಾಡಿದರು ಯಾವುದೇ ಸ್ಪಂದನೆ ನೀಡದೆ, ಮನೆಗೂ ಬಾರದೇ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 92/2021 ನಾಪತ್ತೆ ಪ್ರಕರಣ ದಾಖಲಾಗಿದೆ.