ಬಂಟ್ವಾಳ: ತಂಡವೊಂಡು ವ್ಯಕ್ತಿಯೋರ್ವರ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅ.26 ರಂದು ರಾತ್ರಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ವಿರುದ್ಧ ಹಲ್ಲೆಗೊಳಗಾದ ಪ್ರಕಾಶ್ ರವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿದ ಆರೋಪಿಗಳನ್ನು ನಿತಿನ್, ನಿಶಾಂತ್ ಮತ್ತು ಇತರರು ಎನ್ನಲಾಗಿದೆ.
ಪ್ರಕಾಶ್ ರವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ ವಿಚಾರವಾಗಿ ನಿತಿನ್ ಮತ್ತು ರತ್ನಾಕರ ಎಂಬವರು ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು.
ಅ.26 ರಂದು ಸಂಜೆ ಪ್ರಕಾಶ್ ಮನೆಯಲ್ಲಿದ್ದ ಸಂದರ್ಭದಲ್ಲಿ ನಿತಿನ್, ನಿಶಾಂತ್ ಮತ್ತು ಇತರ ತಂಡ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ನಿತಿನ್ ಕೈಯಲ್ಲಿ ತಲವಾರು ಹಿಡಿದುಕೊಂಡು ಬಂದು ‘ನಮ್ಮ ಬಗ್ಗೆ ಫೇಸ್ ಬುಕ್ ನಲ್ಲಿ ಬಾರಿ ಫೋಸ್ಟ್ ಮಾಡುತ್ತೀಯಾ’ ಎಂದು ಹೇಳಿ ಕೈಯ್ಯಲ್ಲಿದ್ದ ತಲವಾರಿನಿಂದ ಕಡಿಯಲು ಬೀಸಿದ್ದು, ಆ ಸಮಯ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ಎಡ ಕಿವಿಗೆ ತಾಗಿ ಗಾಯವಾಗಿರುತ್ತದೆ. ಅದೇ ಸಮಯ ಉಳಿದೆವರೆಲ್ಲ ಕಡಿ ಬಿಡಬೇಡ ಅವನನ್ನು ಎಂದು ಹೇಳುತ್ತಾ, ಬೆನ್ನಿಗೆ ಬಲ ತೊಡೆಗೆ ಬಲ ಭುಜಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಪ್ರಕಾಶ್ ಜೋರಾಗಿ ಬೊಬ್ಬೆ ಹಾಕಿದಾಗ ಮನೆಯವರೆಲ್ಲ ಗಲಾಟೆ ಬಿಡಿಸಲು ಬಂದಿದ್ದು, ನೀವೂ ಹತ್ತಿರ ಬಂದರೆ ನಿಮ್ಮನ್ನು ಸಹಿತ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 124-2021 ಕಲಂ:- 448, 504 323 324 307 506 ಜೊತೆಗೆ 34 ಐಪಿಸಿ ಪ್ರಕರಣ ದಾಖಲಾಗಿದೆ.