ಪುತ್ತೂರು: ಕಾಲೇಜಿನ ವಿದ್ಯಾರ್ಥಿಯ ಮೇಲೆ ದೈಹಿಕ ಶಿಕ್ಷಣ ನಿರ್ದೇಶಕ ಲೈಂಗಿಕ ದೌರ್ಜನ್ಯ ಕೃತ್ಯ ಎಸಗಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ಮಾಡಬೇಕು. ಸಂತ್ರಸ್ತೆ ಗೆ ನ್ಯಾಯ ಒದಗಿಸಿ, ವಾಸ್ತವ ಅಂಶವನ್ನು ಸಮಾಜದ ಮುಂದಿಡುವಂತೆ ಎಬಿವಿಪಿ ವತಿಯಿಂದ ಪುತ್ತೂರು ತಹಶೀಲ್ದಾರ್ ಗೆ ಮನವಿ ಮಾಡಿಲಾಯಿತು.
ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯದ ಸತ್ಯಾಸತ್ಯತೆಯನ್ನು ಪರಿಶೀಲಿ ತ್ವರಿತ ತನಿಖೆಯನ್ನು ಮಾಡಬೇಕೆಂದು ಎಬಿವಿಪಿಯಿಂದ ಆಗ್ರಹಿಸುತ್ತೇವೆ. ಇದರ ಜೊತೆಗೆ ಪ್ರಕರಣದಲ್ಲಿ ಸಹಜವಾಗಿ ಸಂತ್ರಸ್ತೆ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು, ಹಾಗೂ ಆರೋಪಿ ವ್ಯಕ್ತಿಯನ್ನು ಸಮಗ್ರ ತನಿಖೆಗೆ ಒಳಪಡಿಸಿ ವಾಸ್ತವ ಅಂಶವನ್ನು ಸಮಾಜದ ಮುಂದೆ ಇಡಬೇಕೆಂದು. ಒಂದು ವೇಳೆ ಈ ಘಟನೆಯಲ್ಲಿ ಷಡ್ಯಂತ್ರ ನಡೆದಿದೆ ಎಂದಾದರೆ ಇದನ್ನೂ ಕೂಡಾ ಸಮಗ್ರವಾಗಿ ತನಿಖೆ ಮಾಡಿ ಸಮಾಜದ ಮುಂದೆ ಇಡಬೇಕೆಂದು ಎಬಿವಿಪಿ ಪ್ರಮುಖರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಪುತ್ತೂರು ನಗರ ಕಾರ್ಯದರ್ಶಿ ಜಗದೀಶ್, ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯಿಲ, ಮಂಗಳೂರು ಜಿಲ್ಲಾ ಕಾರ್ಯದರ್ಶಿ ನಿಶಾನ್ ಆಳ್ವ, ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ಬಂಟ್ವಾಳ ತಾಲೂಕು ಸಂಚಾಲಕ ದಿನೇಶ್ ಕೊಯಿಲ, ನಗರ ಕಾರ್ಯದರ್ಶಿ ನಾಗರಾಜ್, ಸಾಮಾಜಿಕಜಾಲತಾಣ ಪ್ರಮುಖ್ ಕಾರ್ತಿಕ್, ವ್ಯವಸ್ಥಾಪನಾ ಪ್ರಮುಖ್ ಗಗನ್, ಪುತ್ತೂರು ಸಹಕಾರ್ಯದರ್ಶಿ ಶಮಂತ್, ಜೀವನ್, ಆಕಾಶ್ ಮತ್ತಿರರು ಮನವಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.