ಪುತ್ತೂರು: ಕೆಯ್ಯೂರು ಗ್ರಾಮದ ಬೈರೆತ್ತಿಕೆರೆ ದಿ. ನಾರಾಯಣ ನಾಯ್ಕರ ಪುತ್ರ ಶ್ರೀಧರ (30) ರವರು ಅನಾರೋಗ್ಯದಿಂದಾಗಿ ಅ.30 ರಂದು ನಿಧನರಾದರು.
ಶ್ರೀಧರ ರವರು ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು. ಮೃತರ ಮನೆಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ.ಕೆ ಜಯರಾಮ ರೈ ,ಅಬ್ದುಲ್ ಖಾದರ್ ಮೇರ್ಲ,ಜಯಂತ ಪೂಜಾರಿ ಕೆಂಗುಡೇಲು, ಜಯಂತ,ಸುಜಯ ಕೆಯ್ಯೂರು, ಹರಿನಾಥ ಹಾಗೂ ಮತ್ತಿತರರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.
ಮೃತರು ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.