ಸುರತ್ಕಲ್: ದ.ಕ ಜಿಲ್ಲಾ ಕನ್ನಡ ಸೇನೆಯ ವತಿಯಿಂದ ಸುರತ್ಕಲ್ ನಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಯೋಧರಿಗೆ ಸಮ್ಮಾನ ಸಮಾರಂಭ ನ.1 ರಂದು ನಡೆಯಿತು. ಜಿಲ್ಲಾಧ್ಯಕ್ಷ ಚಂದ್ರಶೇಖರ ಎ. ಧ್ವಜಾರೋಹಣ ನೆರವೇರಿಸಿದರು.
ಮಾಜಿ ಶಾಸಕ ಮೊಯಿದ್ಧಿನ್ ಬಾವಾ ಮಾತನಾಡಿ, ಸ್ಥಳೀಯ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಕನ್ನಡ ಸೇನೆ ನಿರಂತರ ಹೋರಾಟ ಮಾಡಲಿ ನಾವು ಸದಾ ಬೆಂಬಲಕ್ಕೆ ನಿಲ್ಲಲಿದ್ದೇವೆ ಎಂದರು.
ಕರ್ನಾಟಕದಾದ್ಯಂತ ಕನ್ನಡ ಬಾವುಟ ರಾರಾಜಿಸುವುದನ್ನು ನೋಡಿದ್ದೇವೆ. ಕನ್ನಡ ಸೇನೆಯು ದ.ಕ. ಜಿಲ್ಲೆ ಸುರತ್ಕಲ್ ಸಹಿತ ಎಲ್ಲೆಡೆ ಸಂಘಟಿತ ಹೋರಾಟಕ್ಕೆ ಇಳಿದಿರುವುದು ಉತ್ತಮ ವಿಚಾರ ಜಿಲ್ಲೆಯ ನ್ಯಾಯಯುತ ಬೇಡಿಕೆ ಈಡೇರುವಂತಾಗಲು ನಡೆಯುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.
ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಮಾತನಾಡಿ, ಜಿಲ್ಲೆಯ ಯುವಕರಿಗೆ ಸ್ಥಳೀಯ ಕಂಪೆನಿಯಲ್ಲಿ ಪ್ರಥಮ ಆದ್ಯತೆ ನೀಡಲು ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ನಿವೃತ್ತ ಯೋಧರಾದ ಕಾಯರ್ ಮಾರ್ ವಸಂತ್, ಪ್ರೇಮಾನಂದ ಆಚಾರ್ಯ, ಪುಷ್ಪರಾಜ್ ಕುಮಾರ್, ಯೋಧರ ಪತ್ನಿಯರಾದ ವಸಂತಿ, ಜೆನ್ನಿ ಬಾಯಿ ರನ್ನು ಸನ್ಮಾನಿಸಲಾಯಿತು.
ಪಾಲಿಕೆ ಸದಸ್ಯ ವರುಣ್ ಚೌಟ, ಕನ್ನಡ ಸೇನೆ ಮುಖಂಡರಾದ ಚೆನ್ನಕೇಶವ, ಪ್ರವೀಣ್ ಶೆಟ್ಟಿ, ಪಿಯೂಸ್ ಡಿ’ಸೋಜಾ, ಗುರು ಪ್ರಸಾದ್ ಶೆಟ್ಟಿ, ದೇಜಪ್ಪ ಬಂಗೇರ, ಅಕ್ಷಿತಾ, ಸುರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಂಜೀವ ಸುವರ್ಣ ಸ್ವಾಗತಿಸಿ, ಶೈಲೇಶ್ ಬೈಕಂಪಾಡಿ ನಿರೂಪಿಸಿ, ಸುರೇಶ್ ವಂದಿಸಿದರು.


































