ಬಂಟ್ವಾಳ: ಕಾರಿಂಜ ಮಹಾತೊಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಒಳಗೆ ಚಪ್ಪಲಿ ಹಾಕಿಕೊಂಡು ಪ್ರವೇಶಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಕಾಸರಗೋಡು ಹಾಗೂ ಉಳ್ಳಾಲ ಮೂಲದ ನಾಲ್ವರು ಆರೋಪಿ ಗಳನ್ನು ವಶಕ್ಕೆ ಪಡೆದುಕೊಂಡು ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಿಡಿಗೇಡಿಗಳು ಅಕ್ರಮವಾಗಿ ದೇವಳದ ಒಳಗೆ ಚಪ್ಪಲಿ ಹಾಕಿ ಪ್ರವೇಶ ಮಾಡಿ ಹಿಂಧೂಗಳ ಭಾವನೆಗಳಿಗೆ ದಕ್ಕೆ ತಂದಿದ್ದು. ಅಲ್ಲದೆ ಅದನ್ನು ದೇವಸ್ಥಾನದಲ್ಲಿ ಚಪ್ಪಲಿ ಹಾಕಿ ನಡೆದಾಡುವ ವಿಡಿಯೋ ವನ್ನು ಸಾಮಾಜಿಕ ಜಾಲತಾಣ ದಲ್ಲಿ ಹಾಕಿ ವಿಜ್ರಂಭಿಸಿ ಹಿಂಧುಗಳ ಧಾರ್ಮಿಕ ನಂಬಿಕೆಗೂ ಧಕ್ಕೆ ತಂದಿದ್ದು ಇದನ್ನು ದೇವಸ್ಥಾನದ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದ್ದು ಆರೊಪಿಗಳನ್ನು ಶೀಘ್ರ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿ ಪುಂಜಾಲಕಟ್ಟೆ ಠಾಣೆಗೆ ಮನವಿ ನೀಡಿತ್ತು.
ಘಟನೆಗೆ ಸಂಬಂಧಿಸಿದಂತೆ ಕಾರ್ಯಚರಣೆ ನಡೆಸಿದ ಪುಂಜಾಲಕಟ್ಟೆ ಪೋಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದಂತೆ ಇಬ್ಬರು ಆರೋಪಿಗಳು ಈ ಘಟನೆಯಲ್ಲಿ ಇದ್ದ ಬಗ್ಗೆ ವಿಡಿಯೋದಲ್ಲಿ ಸೆರೆಯಾಗಿದ್ದು ಅವರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.