ಬಂಟ್ವಾಳ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ಎಸಗಿದ ಹಾಗೂ ಅತ್ಯಾಚಾರ ನಡೆಸಿದ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಒಟ್ಟು ಮೂವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಂತ್ರಸ್ತ ಬಾಲಕಿಯೂ ನ .4 ರಂದು ಹಾಗೂ ನ.5 ರಂದು ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ನೀಡಿದ್ದಳು. ಅದರಂತೆ ಎರಡು ಎಫ್‌ಐಅರ್ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಸಂತ್ರಸ್ತ ಬಾಲಕಿಯೂ ನ .4 ರಂದು ಹಾಗೂ ನ.5 ರಂದು ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ನೀಡಿದ್ದಳು. ಅದರಂತೆ ಎರಡು ಎಫ್‌ಐಅರ್ ದಾಖಲಾಗಿದೆ. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದು, ರಿಜ್ವಾನ್ , ಮಹಮ್ಮದ್ ಖಾಸಿಂ ಹಾಗೂ ಅಜ್ಮಲ್ ಹುಸೈನ್ ಬಂಧಿತರು.
ಮೊದಲ ದೂರಿನಲ್ಲಿ ಫರಂಗಿಪೇಟೆ ಎಂಬಲ್ಲಿ ಆಟೊ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದು ಅದರಂತೆ ರಿಕ್ಷಾ ಚಾಲಕ ರಿಜ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಎರಡನೇ ದೂರನ್ನು ತನ್ನ ತಾಯಿಯ ಜತೆ ಬಂದು ಸಂತ್ರಸ್ತೆಯೂ ನೀಡಿದ್ದು ಇದು 5 ತಿಂಗಳ ಹಿಂದೆ ನಡೆದ ಪ್ರಕರಣವಾಗಿದೆ. 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಿತರಾಗಿ ತನ್ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆಕೆ ಆ ದೂರಿನಲ್ಲಿ ವಿವರಿಸಿದ್ದಳು .
ಇದರಂತೆ ಪೊಲೀಸರು ಐಪಿಸಿ ಕಲಂ 376(ಡಿ) 506,ಜೊತೆಗೆ34 ಐಪಿಸಿ ಮತ್ತು ಕಲಂ 4,5(ಜಿ) ಮತ್ತು 6 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾ FIR ದಾಖಲಿಸಿಕೊಂಡಿದ್ದರು. ಈ ಬಗ್ಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅರ್ಕುಳದ ಮಹಮ್ಮದ್ ಖಾಸಿಂ, ಅಜ್ಮಲ್ ಹುಸೈನ್ ಎಂಬವರನ್ನು ಬಂಧಿಸಿದೆ.
ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಾನೆ ಭಗವಾನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಗುಣಾರೆ ನಿರ್ಧೇಶನದಂತೆ ಬಂಟ್ವಾಳ ಉಪವಿಭಾಗಾಧಿಕಾರಿಯಾದ ಶಿವಾಂಶು ರಜಪೂತ್ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಟಿ.ಡಿ ನಾಗರಾಜ್, ಪಿ.ಎಸ್.ಐ ಭಾರತಿ, ತರಭೇತಿ ಪಿ.ಎಸ್.ಐ ರಾಮಕೃಷ್ಣ, ವೀಣಾ ರಾಮಚಂದ್ರ, ಎ.ಎಸ್.ಐ ಬಾಲಕೃಷ್ಣ, ಸಿಬ್ಬಂದಿಯವರಾದ ಜನಾರ್ಧನ, ಸುರೇಶ್, ಪುನೀತ್, ಮನೋಜ್ ಕುಮಾರ್ ,ಲೋಲಾಕ್ಷಿ, ವಿಶಾಲಾಕ್ಷಿ ರವರುಗಳೊನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ಕ್ಷಿಪ್ರ ತನಿಖೆ ಮತ್ತು ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ಪ್ರಶಂಸಿದ್ದಾರೆ.