ಪುತ್ತೂರು: ಜೆಸಿಐ ಕುಂದಾಪುರ ಸಿಟಿಯ ಅತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಪುತ್ತೂರಿನ ಹೆಸರಾಂತ ಪ್ರಸಿದ್ಧ ಡ್ರೈ ಫ್ರೂಟ್ಸ್ ಮಳಿಗೆಯನ್ನು ಸ್ಥಾಪಿಸಿ ಅನೇಕ ಗ್ರಾಹಕರ ಮನೆ ಮಾತಾಗಿರುವ ಲಹರಿ ಡ್ರೈ ಫ್ರೂಟ್ಸ್ ಮಳಿಗೆಯ ಜೆಸಿಐನ ವಲಯದ ಹಿರಿಯ ಘಟಕವಾದ ಜೆಸಿಐ ಪುತ್ತೂರಿನ ಉಪಾಧ್ಯಕ್ಷರಾದ ಜೆ.ಯಫ್.ಡಿ ಕುಸುಮ್ ರಾಜ್ ರವರಿಗೆ ಸಾಧನಶ್ರೀ ಪ್ರಶಸ್ತಿಯನ್ನು ವಲಯಧ್ಯಕ್ಷರಾದ ಜೆಸಿಐ ಪಿ. ಪಿ. ಪಿ ಸೌಜನ್ಯ ಹೆಗ್ಡೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಲಯದ ವ್ಯವಹಾರ ವಿಭಾಗದ ಚೇರ್ಮನ್ ಸಮದ್ ಕಾನ್, ಪುತ್ತೂರಿನ ಘಟಕದ ಅಧ್ಯಕ್ಷೆ ಸ್ವಾತಿ ಜಗನ್ನಾಥ ರೈ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಮುರಳಿ ಶ್ಯಾಮ್,
ಜೆಸಿ ಪುರಂದರ ರೈ ಕುಂಬ್ರ, ಜೆಸಿ ಸುದರ್ಶನ್ ರೈ, ಜೆಸಿ ಕಿರಣ್ ಹೆಗ್ಡೆ, ಪೂರ್ವ ವಲಯ ಅಧ್ಯಕ್ಷರು ಕೃಷ್ಣಮೋಹನ್, ಅಶೋಕ್ ಚೂಂತರೂ, ಜೆಸಿ ಪುರುಷೋತ್ತಮ್ ಶೆಟ್ಟಿ , ಜೆಸಿ ಪಶುಪತಿ ಶರ್ಮಾ, ಜೆಸಿ ಜಗನ್ನಾಥ ರೈ, ಜೆಸಿ ಗೌತಮ್ ರೈ ಹಾಗೂ ಜೆಸಿಐ ಪುತ್ತೂರಿನ ಎಲ್ಲಾ ಸದ್ಯಸರು ಉಪಸ್ಥಿತರಿದ್ದರು.