ಪುತ್ತೂರು : ಈ ಕನ್ನಡದ ಮಣ್ಣಿನ, ಕನ್ನಡ ನಾಡಿನ ಹೆಮ್ಮೆಯ ಆಭರಣ ಸಂಸ್ಥೆ ಮುಳಿಯ ಜ್ಯುವೆಲ್ಸ್ ಈ ಬಾರಿಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡತನವನ್ನು ಬಹಳ ವಿಶೇಷವಾಗಿ ಆಚರಿಸುತ್ತಿದೆ. ಈ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿದೆ. ಕನ್ನಡ ಭಾವಗೀತಾಭಿನಯ ಹೆಗ್ಗಳಿಕೆಯ ಶ್ರೀಮತಿ ಮಾನಸಿ ಸುಧೀರ್ ಇವರಿಂದ “ಕನ್ನಡ ಬದುಕು ಬಂಗಾರ” ಎಂಬ ವಿಶೇಷ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ಆಯೋಜಿಸುತ್ತಿದೆ.
ಇದರ ಮುಖಾಂತರ “ಬೆಳೆಸೋಣ ನಮ್ಮತನ” ಎಂಬ ಸಂದೇಶವನ್ನು ಸಂಸ್ಥೆಯು ಸಾರಲಿದೆ. ಈ ಕಾರ್ಯಕ್ರಮವು ನವೆಂಬರ್ ೧೦ರಂದು ಬೆಳಿಗ್ಗೆ 10:30ರಿಂದ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ನಿಕಟಪೂರ್ವಾಧ್ಯಕ್ಷ ಆಗಿರುವ ಶ್ರೀ ಬಿ ಐತ್ತಪ್ಪ ನಾಯ್ಕ್ ಆಗಮಿಸಲಿದ್ದಾರೆ.
ಕನ್ನಡತನದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ.ಮುಳಿಯ ಚಿನ್ನೋತ್ಸವದ ಸಂದರ್ಭದಲ್ಲಿ ನಡೆಯುವ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಂಸ್ಥೆಯ ಚೇರ್‌ಮೇನ್‌ರವರಾದ ಮುಳಿಯ ಕೇಶವ ಪ್ರಸಾದ್ ರವರು “ಕನ್ನಡತನದ ಸಾಂಸ್ಕೃತಿಕ ಪರಂಪರೆಯುಳ್ಳ ನಾಡಿನ ಹೆಮ್ಮೆಯ ಆಭರಣ ಉದ್ಯಮ ಸಂಸ್ಥೆಯಾದ ಮುಳಿಯ ಜ್ಯುವೆಲ್ಸ್ ಸಾಹಿತ್ಯ, ಸಂಸ್ಕೃತಿಯನ್ನು ನಮ್ಮ ಮನೆತನದ ಬದುಕು-ಭಾವವಾಗಿದೆ. ಹೀಗಾಗಿ ಈ ಬಗೆಯ ಕಾರ್ಯಕ್ರಮ ಎಂದು ಹೇಳಿದರು.