ಪುತ್ತೂರು: ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಹರಿಶ್ಚಂದ್ರ ಪಡುಮಲೆ ಯವರಿಗೆ ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಶ್ರದ್ಧಾಂಜಲಿ ಸಭೆ ನ.10 ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ಸಭಾಭವನದಲ್ಲಿ ನಡೆಯಿತು.
ನುಡಿನಮನ ಸಲ್ಲಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಹರಿಶ್ಚಂದ್ರ ಪಡುಮಲೆ ಒಬ್ಬ ಸಂಘಟನೆಯ ನಿಷ್ಟಾವಂತ ಕಾರ್ಯಕರ್ತನಾಗಿ ಹಗಲು ಇರುಳು ಎನ್ನದೆ ಸಂಘಟನೆ, ಧರ್ಮ, ಸಮಾಜಕ್ಕಾಗಿ ದುಡಿದವರು ಅವರ ಅಗಲುವಿಕೆ ನಮ್ಮೆಲ್ಲರಿಗೂ ಬಹಳಷ್ಟು ನೋವು ಮತ್ತು ನಷ್ಟ ಉಂಟುಮಾಡಿದೆ,ಅವರ ಆತ್ಮಕ್ಕೆ ಭಗವಂತನು ಸದ್ಗತಿ ನೀಡಲಿ,ಅವರ ಕನಸ್ಸು ನನಸು ಮಾಡುವ ದೃಷ್ಟಿಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಅವರು ಹಾಕಿದ ದಾರಿಯಲ್ಲಿ ನಡೆಯುವುದೇ ಅವರಿಗೆ ನಾವು ಮಾಡುವ ನಿಜವಾದ ಶ್ರದ್ಧಾಂಜಲಿ ನಮನ ಎಂದರು.
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ,ಬಡಗನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ರಾಜೇಶ್ ಪಂಚೊಡಿ, ಹಿಂದೂ ಯುವವಾಹಿನಿ ಪ್ರಮುಖ್ ಪ್ರಶಾಂತ್ ಬಿಸಿ ರೋಡ್,ಪುತ್ತೂರು ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜ ನಗರ, ಉಪಾಧ್ಯಕ್ಷ ಶಶಿಕಾಂತ್ ಕೋರ್ಟ್ ರೋಡ್ ,ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರ ಕಟ್ಟೆ,ನಗರ ಅಧ್ಯಕ್ಷ ಪುಷ್ಪರಾಜ್ ದರ್ಬೆ, ಪ್ರಮುಖರಾದ ಸ್ವಸ್ತಿಕ್ ಸರ್ವೇ, ರಾಕೇಶ್ ಓಜಾಲ, ಗೀತೇಶ್, ಮನೀಶ್ ಬನ್ನೂರು,ಕಿರಣ್ ಬೆದ್ರಾಲ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.