ಬೆಟ್ಟಂಪಾಡಿ: ದೀಪಾವಳಿಯ ಬಳಿಕದ ಮೊದಲ ಜಾತ್ರೋತ್ಸವವಾಗಿರುವ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನ. 19 ರಿಂದ 21 ರವರೆಗೆ ವರ್ಷಾವಧಿ ಉತ್ಸವ ನಡೆಯಲಿದ್ದು, ಆ ಪ್ರಯುಕ್ತ ಗೊನೆ ಮುಹೂರ್ತ ನ.12 ರಂದು ಬೆಳಿಗ್ಗೆ ನಡೆಯಿತು.
ಗೊನೆಮಹೂರ್ತಕ್ಕೆ ಮುಂಚಿತವಾಗಿ ದೇವಳದಲ್ಲಿ ಅರ್ಚಕ ದಿವಾಕರ ಭಟ್ ರವರು ಜಾತ್ರೋತ್ಸವದ ಸಕಲ ಕಾರ್ಯಗಳು ಸಾಂಗವಾಗಿ ನೆರವೇರಲು ದೇವರಲ್ಲಿ ಪ್ರಾರ್ಥಿಸಿದರು. ಬೆಟ್ಟಂಪಾಡಿ ಬೀಡು ಶಿವಕುಮಾರ್ ಬಲ್ಲಾಳ್ ರವರ ತೋಟದಲ್ಲಿ ಗೊನೆಮುಹೂರ್ತ ನೆರವೇರಿಸಲಾಯಿತು. ಸಹಾಯಕ ಅರ್ಚಕ ಕೃಷ್ಣ ಕುಮಾರ್ ಗೊನೆ ಕಡಿಯುವ ಮೂಲಕ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಶಿವಕುಮಾರ್ ಬಲ್ಲಾಳ್ ಉಪಸ್ಥಿತರಿದ್ದರು. ಸಿಬ್ಬಂದಿ ವಿನಯ ಕುಮಾರ್, ಪ್ರಮೋದ್ ಸಹಕರಿಸಿದರು.