ಮಂಗಳೂರು: ಚಿಕಿತ್ಸೆಗೆ ಹೊಗುತ್ತೇನೆಂದು ಹೇಳಿ ನಿನ್ನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನೊಳಗೆ ಶವವಾಗಿ ಪತ್ತೆಯಾದ ಘಟನೆ ನ.12 ರಂದು ಕಂಕನಾಡಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಣ್ಣಗುಡ್ಡೆಯ ಪ್ರಶಾಂತ್(44) ಎನ್ನಲಾಗಿದೆ.
ವರದಿಗಳ ಪ್ರಕಾರ, ನಿನ್ನೆ ಚಿಕಿತ್ಸೆಗೆ ಹೋಗುವುದಾಗಿ ಹೇಳಿ ಪ್ರಶಾಂತ್ ಅವರದ್ದೇ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಆದರೆ, ಮನೆಗೆ ಬಾರದೇ ಇದ್ದಾಗ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮೊಬೈಲ್ ಲೊಕೇಷನ್ ಆಧರಿಸಿ ಪತ್ತೆಗೆ ಮುಂದಾಗಿದ್ದು,. ಆಗ ಕಂಕನಾಡಿಯ ಹೊಟೇಲ್ ವೊಂದರ ಬಳಿ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ.