ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ, ಲಯನ್ಸ್ ಕ್ಲಬ್ ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಯಲ್.ಯನ್.ಎಸ್. ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಕೆಎಂಸಿ ಹಾಸ್ಪಿಟಲ್ ಅತ್ತಾವರ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರ ಹಾಗೂ ಕೃಷಿ ಮಾಹಿತಿ ಕಾರ್ಯಾಗಾರ ಗುತ್ತಿಗಾರಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ಶಿಬಿರದಲ್ಲಿ ದಂತ, ಕಣ್ಣು, ಕಿವಿ, ಗಂಟಲು, ಜನರಲ್,ಮಕ್ಕಳ ಮತ್ತು ಹೆಂಗಸರ ಆರೋಗ್ಯ ತಪಾಸಣೆ ನಡೆಯಿತು. ಸುಮಾರು 125ಕ್ಕೂ ಹೆಚ್ಚು ಜನರು ಪ್ರಯೋಜನವನ್ನು ಪಡೆದುಕೊಂಡರು.
ಮುಖ್ಯ ಅತಿಥಿಗಳಾಗಿ ವಿಜ್ಞಾನಿ ಡಾ. ವಿಶು ಕುಮಾರ್ ಉದ್ಘಾಟಿಸಿ ಮಾತನಾಡಿ, ರೈತರಿಗೆ ಕೃಷಿ ಮಾಹಿತಿ ನೀಡಿದರು.ಸಭೆಯನ್ನು ಸಂಸ್ಥೆಯ ಕಾವ್ಯ ಮತ್ತು ನವ್ಯಶ್ರೀ ಯವರ ಪ್ರಾಥನೆಯೊಂದಿಗೆ ಪ್ರಾರಂಭಿಸಲಾಯಿತು. ಲಯನ್ಸ್ ಅಧ್ಯಕ್ಷ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಬಗ್ಗೆ ತಾಲೂಕು ಮೇಲ್ವಿಚಾರಕ ಹವಿನ್ ಕುಮಾರ ಪ್ರಸ್ತಾವಿಕ ಮಾತನಾಡಿದರು.
ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆ ವತಿಯಿಂದ ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ನವರ ಆಂಬುಲೆನ್ಸ್ ಖರೀದಿಗೆ ಸಹಾಯಧನವಾಗಿ ರೂ 5000/ ಗಳ ಚೆಕ್ಕನ್ನು ನೀಡಲಾಯಿತು.
ಸಭೆಯಲ್ಲಿ ಲಯನ್ಸ್ ಅಧ್ಯಕ್ಷ ಲಿಜೊ ಜೋಸ್, ತೆಂಗು ಸಂಸ್ಥೆಯ ಉಪಾಧ್ಯಕ್ಷ ಕುಸುಮ್ ರಾಜ್, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಜ್ಞಾನ ಯಲ್.ಯನ್.ಯಸ್, ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಲಯನ್ ಸಂತೋಷ್ ಶೆಟ್ಟಿ, ಕೆಎಂಸಿ ಆಸ್ಪತ್ರೆಯ ಅಧಿಕಾರಿ, ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚಂದ್ರ ಶೇಖರ್ ಕಡೋಡಿ, ಲಯನ್ಸ್ ನ ಸ್ಥಾಪಕಧ್ಯಕ್ಷ ನಿತ್ಯಾನಂದ ಮುಂಡೋಡಿ, ಲಯನ್ಸ್ ಪದಾಧಿಕಾರಿಗಳಾದ ನವೀನ್ ಬಾಳುಗೋಡು, ಕುಶಾಲಪ್ಪ ಗೌಡ ಉದಯಕುಮಾರ್, ಮೋಹನ್,ಬಾಲಕೃಷ್ಣ ಮತ್ತು ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಸ್ಥೆಯ ನೋಡೆಲ್ ಅಧಿಕಾರಿ ಸುಬ್ಬು ಸಂಟ್ಯಾರ್ ಕಾರ್ಯಕ್ರಮ ನಿರೂಪಿಸಿದರು.