ಮಂಗಳೂರು: ನಾಗಬನದಲ್ಲಿನ ವಿಗ್ರಹ ಕಿತ್ತು ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿಕಲ್ ಪ್ರದೇಶದಲ್ಲಿ ಸಂಪೂರ್ಣ ಬಂದ್ ಆಚರಿಸಿ ಸೋಮವಾರ ಪ್ರತಿಭಟನೆ ನಡೆಸಲಾಗುತ್ತಿದೆ.
ಸೋಮವಾರ ಬೆಳ್ಳಿಗ್ಗೆ 9ರಿಂದ ಸಂಜೆ 6ರ ವರೆಗೆ ಶಾಂತಿಯುತ, ಸ್ವಯಂ ಪ್ರೇರಿತ ಬಂದ್ ನಡೆಸಲಾಗುತ್ತಿದೆ.
ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಮಾಡಿದವರನ್ನು, ನಾಗನ ಮೂರ್ತಿಗೆ ಅಪಚಾರವೆಸಗಿದವರನ್ನು ಎನ್ ಕೌಂಟರ್ ಮಾಡಿ:
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶರಣ್ ಪಂಪ್ವೆಲ್, ಒಂದು ಎರಡು ದಿವಸ ನಮಗೆ ಬಂಧನ ಮಾಡಲು ಸಾಧ್ಯವಿಲ್ಲ, ಸ್ವಲ್ಪ ಸಮಯದ ಅವಶ್ಯಕತೆಯಿದೆ ಆಗ ಬಂಧಿಸುತ್ತೇವೆ ಎಂದು ಹೇಳಿದ್ರು, ಪೊಲೀಸ್ ಆಯುಕ್ತರೇ ನೀವು ಈ ರೀತಿಯಾಗಿ ಹೇಳಿಕೆಯನ್ನು ನೀಡಿ ಇವತ್ತು ಆರೋಪಿಗಳು ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದಾರೆ.
ನೀವು ಇದರ ಜವಾಬ್ದಾರಿಯನ್ನು ವಹಿಸಬೇಕು. ಯಾರೂ ಈ ಕೃತ್ಯ ನಡೆಸುತ್ತಿದ್ದಾರೆ ಅವರನ್ನು ಶೀಘ್ರವಾಗಿ ಬಂಧಿಸಬೇಕು ಅದನ್ನು ಬಿಟ್ಟು ನಮಗೆ ಸಮಯಬೇಕು ಅಂತಾ ಕೇಳಿದ್ರೆ ಯಾರೂ ಈ ಕೃತ್ಯ ನಡೆಸಿದ್ದಾರೆ ಅವರಿಗೆ ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಅದಕ್ಕಾಗಿ ತಮ್ಮಲ್ಲಿ ಆಗ್ರಹಿಸುತ್ತಿದ್ದೇನೆ ‘ಹಿಂದೂ ದೇವಸ್ಥಾನದ ಮೇಲೆ ದಾಳಿ, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಇದು ಇವತ್ತಿಗೆ ಕೊನೆಯಾಗ ಬೇಕಾದರೇ, ಈ ಕೃತ್ಯವೆಸಗಿದವನು ಮಾನಸಿಕ ಅಸ್ವಸ್ಥನಾಗಿರಲೀ, ಇನ್ನೊಬ್ಬನಾಗಿರಲೀ ನೀವು ಬಂಧನ ಮಾಡಿದ ತಕ್ಷಣ ಅವನನ್ನು ಎನ್ ಕೌಂಟರ್ ಮಾಡಿ ಅವಾಗ ಈ ದುಷ್ಕೃತ್ಯಗಳಿಗೆ ಕಡಿವಾಣ ಬೀಳಲಿದೆ’ ಎಂದರು.
ನಗರದ ಬಂಗ್ರ ಕೂಳೂರು ವಾರ್ಡ್‌ನ ಕೋಡಿಕಲ್‌ನ ನಾಗಬನದಿಂದ ನಾಗನ ಕಲ್ಲನ್ನು ಎಸೆದಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಉರ್ವ ಪೊಲೀಸರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಈ ಹಿಂದೆ ಬೇರೆ ಕಡೆಗಳಲ್ಲಿ ಇದೇ ರೀತಿಯ ಕೃತ್ಯಗಳಲ್ಲಿ ಪಾಲ್ಗೊಂಡಿದ್ದವರು, ಗಾಂಜಾ ವ್ಯಸನಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕೋಡಿಕಲ್ ಪರಿಸರದಲ್ಲಿ ಲಭ್ಯವಾದ ಸಿಸಿ ಕೆಮರಾ ದೃಶ್ಯಗಳನ್ನು ಕೂಡ ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ.