ಮಂಗಳೂರು: ಕುರ್ನಾಡಿನ ಮಸೀದಿಯ ಬಳಿ ಶಾಂತಿ ಕದಡಲು ಯತ್ನಿಸಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಭಾನುವಾರ ರಾತ್ರಿ ಮೂವರು ಯುವಕರು ಮಸೀದಿಯ ಬಳಿ ಬಂದು ಬೊಬ್ಬೆ ಹಾಕಿದ್ದಾರೆ. ಅಲ್ಲದೇ ಮಸೀದಿಯೊಳಗೆ ನುಗ್ಗಲು ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಕರನ್ನು ಬೆನ್ನಟ್ಟಿದ ಸಾರ್ವಜನಿಕರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇನ್ನಷ್ಟೇ ಎಫ್‌ಐಆರ್ ದಾಖಲಿಸಬೇಕಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.