ಪುತ್ತೂರು: ಮಂಗಳೂರಿನ ವಿಚಕ್ಷಣ ಮತ್ತು ಅರಣ್ಯ ಸಂಚಾರಿ ದಳದ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಪುತ್ತೂರು ಸಾಮೆತ್ತಡ್ಕ ನಿವಾಸಿ ಪ್ರವೀಣ್ ಶೆಟ್ಟಿ : ಪಿ.ಎನ್.ರವರು ಮಂಗಳೂರುಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದಾರೆ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿ ಸೇವೆಸಲ್ಲಿಸಿದ್ದ ಇವರು ಸುಳ್ಯ ತಾಲೂಕಿನ ಪಂಜದಲ್ಲಿಯೂ ಸಹಾಯಕ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಸಾಮಾಜಿಕ ಅರಣ್ಯ ಇಲಾಖೆ ಮಂಗಳೂರಿನ ಸಹಾಯಕ ಅರಣ್ಯಸಂರಕ್ಷಣಾಧಿಕಾರಿಯಾಗಿ ಮುಂಬಡ್ತಿಹೊಂದಿರುತ್ತಾರೆ.