ಪುತ್ತೂರು: ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರ ನಡುವೆ ಮತ್ತೆ ಮಾತಿನ ಚಕಮಕಿ ನಡೆಯುತ್ತಿದ್ದ ಘಟನೆ ನ.20 ರಂದು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ.
ನೆಲ್ಲಿಕಟ್ಟೆ ಬಳಿ ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳ ಗುಂಪೊಂದು ಗುಂಪು ಸೇರಿದ್ದು, ಈ ನಡುವೆ ಕೆಲವರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದ್ದು, ಆ ಸಂದರ್ಭದಲ್ಲಿ ಪೊಲೀಸ್ ಜೀಪ್ ಬರುತ್ತಿರುವುದನ್ನು ಗಮನಿಸಿದ ಎಲ್ಲರು ಅವರವರ ಪಾಡಿಗೆ ತೆರಳಿದ್ದಾರೆ ಎನ್ನಲಾಗಿದೆ. ನಿನ್ನೆ ನಡೆದ ಘಟನೆಯ ಮುಂದುವರಿದ ಭಾಗವಾಗಿ ಇಂದು ಗುಂಪುಗಟ್ಟಿ ಮಾತನಾಡುತ್ತಿದ್ದಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ…