ಬಂಟ್ವಾಳ: ಅಂಗಡಿಯೊಳಗೆ ಅನೇಕ ಸಮಯಗಳಿಂದ ಅಕ್ರಮವಾಗಿ ಮಟ್ಕಾ ಅಡ್ಡೆ ನಡೆಯುತ್ತಿದ್ದ ಬಗ್ಗೆ ವ್ಯಾಪಕ ದೂರು ಬಂದ ಹಿನ್ನಲೆಯಲ್ಲಿ ಬಂಟ್ವಾಳ ಎಎಸ್ಪಿ ಹಿಮಾಂಶು ರಜಪೂತ್ ಮತ್ತು ತಂಡ ದಾಳಿ ನಡೆಸಿದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಜಂಕ್ಷನ್ ನಲ್ಲಿ ನಡೆದಿದೆ.
ದಾಳಿ ವೇಳೆ ಅಂಗಡಿ ಮಾಲಕ ವಿಶ್ವನಾಥ್ ಮತ್ತು ಏಜೆಂಟ್ ಶ್ರೀಧರ್ ಎಂಬವರನ್ನು ಬಂಧಿಸಿದ್ದು, ಯೋಗೀಶ್ ಎಂಬಾತ ಪರಾರಿಯಾಗಿದ್ದು, 4,500/- ಹಣ, ಮೂರು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ..