ಬೆಳ್ತಂಗಡಿ: ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿಯ ಕುತ್ರೋಟು ದೇವರಗುಂಡಿ ನದಿಯಲ್ಲಿ ನಡೆದಿದೆ.
ಮೃತನನ್ನು ನಬಾನ್(18) ಎನ್ನಲಾಗಿದೆ.
ನದಿಯಲ್ಲಿ ಈಜಲು ಹೋಗಿ ಮೂವರು ಗೆಳೆಯರು ನೀರಿಗೆ ಇಳಿದಿದ್ದು, ಅದರಲ್ಲಿ ನಬಾನ್ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ತಕ್ಷಣ ಸ್ಥಳೀಯರು ನೀರಿಗಿಳಿದು ಯುವಕನನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದು, ಆದರೇ ದಾರಿ ಮಧ್ಯೆಯೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ..