ಪುತ್ತೂರು: ದೈವ ಸೇವಾಕಾರ್ಯದಲ್ಲಿ ಮಧ್ಯಸ್ಥರಾಗಿ ಸೇವೆ ಮಾಡುತ್ತಿದ್ದ ಬನ್ನೂರು ನಿವಾಸಿ ಭರತ್ ಭಂಡಾರಿ ಅನಾರೋಗ್ಯದಿಂದ ನ.29 ರ ನಸುಕಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿಯವರ ಪುತ್ರ ಭರತ್ ಭಂಡಾರಿ ಅವರು ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥರಾಗಿ ತೊಡಗಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಇತ್ತೀಚೆಗೆ ಅವರು ಜಾಂಡೀಸ್ ಖಾಯಿಲೆಗೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೃತರು ತಂದೆ ಗಂಗಾಧರ ಭಂಡಾರಿ, ತಾಯಿ ಪುಷ್ಪ, ಸಹೋದರಿಯನ್ನು ಅಗಲಿದ್ದಾರೆ.