ಪುತ್ತೂರು: ಭಾರೀ ವಿವಾದ ಸೃಷ್ಟಿಸಿದ್ದ ಕೊಂಬೆಟ್ಟು ಕಾಲೇಜಿನ ಹೊಡೆದಾಟ ಪ್ರಕರಣ ಅಂತ್ಯವಾದ ನಂತರ ಕೆಲ ಕಿಡಿಗೇಡಿಗಳು ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಯ ಫೋಟೋ ಬಳಸಿ ಅದನ್ನು ಅಶ್ಲೀಲ ರೀತಿಯಲ್ಲಿ ಸೃಷ್ಟಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೆಟ್ಟ ಕಾಮೆಂಟ್ ಗಳನ್ನು ಹಾಕುವ ವಿದ್ಯಾರ್ಥಿಗಳ ಮಾನ ಹಾನಿ ಮಾಡುವ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಉಸ್ಮಾನಕ, ಟ್ರೋಲ್ ಬ್ಲಾಕ್ ಡೆವಿಲ್ ಹಾಗೂ ಇನ್ನಿತರ ಟ್ರೋಲ್ ಪೇಜ್ ಗಳನ್ನು ಸೃಷ್ಟಿಸಿಕೊಂಡು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಫೋಟೋಗಳನ್ನು ಅಶ್ಲೀಲವಾಗಿ ಬಳಸಿಕೊಂಡು ಅವಾಚ್ಯ ಶಬ್ಧಗಳ ಕಮೆಂಟ್ ಮಾಡಲಾಗುತ್ತಿದೆ..
‘ನಿನ್ನನು ಲವ್ ಜಿಹಾದ್ ಮಾಡಬೇಕಿತ್ತು ನಿನ್ನನ್ನು ಬಿಡೆವು’ ಎಂಬ ತಲೆಬರಹ ದ ಆಡಿ ವಿದ್ಯಾರ್ಥಿನಿಯ ಫೋಟೋ ಹಾಗೂ ಅಲ್ಲಿನ ಹಿಂದೂ ವಿಧ್ಯಾರ್ಥಿಗಳ ಫೋಟೋ ಬಳಸಿ ‘ನಿಮ್ಮನ್ನು ಬಿಡುವುದಿಲ್ಲ’ ಎನ್ನುವ ಜೀವ ಬೆದರಿಕೆಯೊಡ್ದುವಂತಹ ಪದಗಳನ್ನು ಬಳಸಿ ಹಾಕಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಬಗ್ಗೆ ಕೆಟ್ಟ ರೀತಿಯಲ್ಲಿ ಪ್ರಚಾರ ಮಾಡಿ ಅವರ ಭವಿಷ್ಯಕ್ಕೆ ಹಾನಿ ಮಾಡುತ್ತಿದ್ದು ಪೊಲೀಸರು ಸ್ವಯಂ ಇಂತಹ ಟ್ರೊಲ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ವಿದ್ಯಾರ್ಥಿಗಳ ಬಗ್ಗೆ ಕೆಟ್ಟದಾಗಿ ಬರೆದು ಅವರ ಭವಿಷ್ಯದ ಜೊತೆ ಈ ರೀತಿಯಾಗಿ ಆಟವಾಡುತ್ತಿರುವುದು ಶೋಚನೀಯವಾಗಿದೆ..