ವಿಟ್ಲ: ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಶತಮಾನೋತ್ಸವದ ಸಂಭ್ರಮದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿನ ಪೂರ್ವ ಪ್ರಾಥಮಿಕ ತರಗತಿಗೆ ಬೆಂಚು ಡೆಸ್ಕ್ ಖರೀದಿಸಲು ಸಹಾಯಧನದ ಚೆಕ್ಕನ್ನು ಶಾಲಾ ಮುಖ್ಯ ಶಿಕ್ಷಕರಾದ ನಾರಾಯಣ ಪೂಜಾರಿಯವರಿಗೆ ಸಂಘದ ಅಧ್ಯಕ್ಷರಾದ ವೀರಪ್ಪ ಮೂಲ್ಯ ಬೆತ್ತಸರವು ನೀಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪದ್ಮನಾಭ ಮೂಲ್ಯ ಮಜಿ, ಹಾಗೂ ಕಾರ್ಯದರ್ಶಿ ಹರೀಶ್ ಬಂಗೇರ ಉಪಸ್ಥಿತರಿದ್ದರು.