ಬಡತನದ ಬೇಗೆಯಲ್ಲಿ ಬದುಕು ದೂಡುವ ಸ್ಥಿತಿ ಒಂದೆಡೆ, ಬೀಡಿ ಕಟ್ಟಿ ಬದುಕು ದೂಡುತ್ತಿದ್ದ ಮಹಿಳೆ ಇಂದು ಮಲಗಿದ್ದಲ್ಲೇ ನರಳಾಡುವ ಸ್ಥಿತಿ.. ತನ್ನಿಂದ ಮನೆ ದೂಡುವ ಕನಸು ಮತ್ತೊಂದೆಡೆ, ಆದರೆ ಆ ಕನಸುಗಳು ಗರಿಗೆದರುವ ವೇಳೆಗೆ ಬದುಕಿನ ದಿಕ್ಕೇ ಬದಲಾಗಿದೆ.. ಈಗಂತೂ ಬೆಳೆಯುತ್ತಿರುವ ಮಕ್ಕಳು ಮತ್ತು ಮರದ ಕೆಲಸ ಮಾಡುವ ಇವರ ಪತಿ ಆರ್ಥಿಕ ಸಮಸ್ಯೆಯಿಂದಾಗಿ ಬಳಲುವಂತಾಗಿದೆ. . ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಒಡಲೊಳಗೆ ಪುಟ್ಟ ಕಂದಮ್ಮ ಬರುವ ನಿರೀಕ್ಷೆಯಲ್ಲೇ ಸಂತಸದ ವಾತಾವರಣದ ಮಧ್ಯೆ ಬದುಕಿನ ದಾರಿಯ ಸಮಸ್ಯೆ ಈ ಬಡಕುಟುಂಬದ ಸಮೀಪ ಬಂದು ಸೈತಾನನಂತೆ ಆವರಿಸಿಕೊಳ್ಳುತ್ತದೆ.
ಕಳೆದ ಐದಾರು ವರ್ಷಗಳಿಂದ ಇಂತಹ ಒಂದು ಆರೋಗ್ಯ ಸಮಸ್ಯೆಯನ್ನು ಬಸಿರಲ್ಲಿಟ್ಟುಕೊಂಡು ಎದುರಿಸುತ್ತಿರುವವರೇ ಗೀತಾ.. ಮಗುವನ್ನು ಒಡಲಲ್ಲಿಟ್ಟುಕೊಂಡಿದ್ದ ಸಂದರ್ಭದಲ್ಲಿ ಗೀತಾ ಅವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಎದುರಾಗಿ, ಕಡೆಗೆ ಈ ಸಮಸ್ಯೆ ಕೈಗೇ ನಿಲುಕದಂತೆ ತೀವ್ರವಾಯಿತು. ಎನೆಪೋಯ ಆಸ್ಪತ್ರೆಯಲ್ಲಿ ಹೆರಿಗೆ ಆದ ಬಳಿಕ, ಸಮಸ್ಯೆಗೆ ಆರು ತಿಂಗಳ ಕಾಲ ಔಷಧಿ ನೀಡುತ್ತಾ ಬಂದರೂ ಯಾವುದೇ ರೀತಿಯ ಗುಣಮುಖ ಬದಲಾವಣೆಗಳು ಕಂಡು ಬರದೇ ಮತ್ತೆ ಬೇರೆ ಚಿಕಿತ್ಸೆ ನಡೆಸಿದರೂ ಖರ್ಚುಗಳೇ ಆಗುತ್ತಿದ್ದು, ಯಾವ ಬದಲಾವಣೆಯೂ ಕಂಡು ಬರದೇ ಕಿಡ್ನಿ ವೈಫಲ್ಯ ಸಮಸ್ಯೆ ಎದುರಾಯಿತು.
ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ಲಕ್ಷಾಂತರ ರೂಪಾಯಿ ಖರ್ಚುಗಳಾದರೂ ಸಮಸ್ಯೆ ಕೊನೆಗಾಣಲೇ ಇಲ್ಲ.. ಬಳಿಕ ಮಂಗಳಾ ಆಸ್ಪತ್ರೆಗೆ ದಾಖಲಿಸಿ, ಡಾ. ಪ್ರಶಾಂತ್ ನೇತೃತ್ವದಲ್ಲಿ ಡಯಾಲಿಸಿಸ್ ನಡೆಸುತ್ತಿದ್ದು, ಈ ಪ್ರಕ್ರಿಯೆಗೆ ಸಾಕಷ್ಟು ಖರ್ಚುಗಳಾಗುತ್ತಿದ್ದು, ಪಿಸ್ತೂಲ ಆಪರೇಷನ್ ಮತ್ತೆ ಪಿಸ್ತೂಲ ರಿಮೂವ್, ಮತ್ತೆ ಎರಡನೇ ಬಾರಿಗೆ ಪಿಸ್ತೂಲ ಅಳವಡಿಕೆ ಅಂತ ಮೂರು ಬಾರಿ ಇದೇ ಸಮಸ್ಯೆಯಾಗಿ ಮತ್ತೂ ಖರ್ಚುಗಳಾಗುತ್ತಿದ್ದು, ಪ್ರಸ್ತುತ ಕಣಚ್ಚೂರಿನಲ್ಲಿ ಚಿಕಿತ್ಸೆ ನಡೆಯುತ್ತಿದ್ದು ತಿಂಗಳಿಗೆ ಸಾವಿರಾನುಗಟ್ಟಲೆ ಖರ್ಚುಗಳಾಗುತ್ತಿದೆ. ಇದರ ಜತೆಗೆ ಕಿಡ್ನಿ ಬದಲಾವಣೆ ಮಾಡುವ ಆಲೋಚನೆ ಇದ್ದು, ಯಾರಿಂದಾದರೂ ಕಿಡ್ನಿ ದಾನ ಪಡೆಯುವುದಾದರೂ ಲಕ್ಷ ರೂಪಾಯಿ ಮೌಲ್ಯದ ಅನಿವಾರ್ಯತೆ ಇದೆ.. ಮಕ್ಕಳು ಕೂಡಾ ಸಣ್ಣವರಾಗಿದ್ದು, ಮನೆ ಪರಿಸ್ಥಿತಿ ಕಷ್ಟದಲ್ಲಿದ್ದು, ಇದರ ಜತೆಗೆ ಗೀತಾ ಅವರಿಗೆ ಕಣ್ಣಿನ ಸಮಸ್ಯೆಯೂ ಎದುರಾಗಿದೆ.. ಆಸ್ಪತ್ರೆ ಬಿಲ್ ಕಟ್ಟಲೂ ಹಣದ ಕೊರತೆ.. ಹಾಗಾಗಿ ಈ ಬಡ ಕುಟುಂಬದ ಗೀತಾ ಅವರ ಸಮಸ್ಯೆಗೆ ಸ್ಪಂದಿಸುವಂತೆ ದಾನಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
Bank of BarodaName. MRS GeethaA/C No.70470100002229Branch. ManjanadyIFSC code. BARBOVJMADYMob no 7676577930
Karnataka Bank
Account Name. Shivaram Kulal
A/C No. 4462500100190301
A/C Type.. Savings Bank
IFSC code..KARB0000446