ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಿಲ್ಲಿಸಿದ್ದ ಅನ್ಯಮತೀಯರ ವಾಹನವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೋಲಿಸ್ ಇಲಾಖೆಯ ಮೂಲಕ ತೆರವುಗೊಳಿಸಿದ ಘಟನೆ ಡಿ.2 ರಂದು ನಡೆದಿದೆ.
ದೇವಸ್ಥಾನದ ವಠಾರದಲ್ಲಿ ಯಾವುದೇ ಅನ್ಯಮತೀಯರ ವಾಹನಗಳನ್ನು ನಿಲ್ಲಿಸದಂತೆ ಈ ಮೊದಲೇ ಆಡಳಿತ ಮಂಡಳಿ ಹಾಗೂ ಹಿಂದೂ ಸಂಘಟನೆಗಳು ಸೂಚನೆ ನೀಡಿ ಬ್ಯಾನರ್ ಅಳವಡಿಸಿದ್ದು, ಸೂಚನೆಯ ನಂತರವೂ ಇಂದು ವಾಹನ ನಿಲ್ಲಿಸಿದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೊಲೀಸ್ ಇಲಾಖೆಯ ಮೂಲಕ ವಾಹನವನ್ನು ತೆರವುಗೊಳಿಸಿದರು ಎಂದು ತಿಳಿದು ಬಂದಿದೆ..