ಪುತ್ತೂರು: ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಮಾಸಿಕ ಸಭೆಯು ಶಾರದಾ ಅರಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರತಿ ಬೂತ್ ಮಟ್ಟದಲ್ಲಿ ಮಹಿಳಾ ಸಂಘಟನೆಯನ್ನು ಬಲಿಷ್ಠಗೊಳಿಸಲು ಅಧ್ಯಕ್ಷರು ಎಲ್ಲರ ಸಹಕಾರ ಕೋರಿದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ದಿನದಂದು ಮಹಿಳಾ ಕಾಂಗ್ರೆಸ್ ಅಯೋಜಿಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಲ ರಾಮಚಂದ್ರ, ರಾಜೀವ್ ಗಾಂಧಿ ಪಂಚಾಯತ್ ಸಂಘಟಣೆಯ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಚಿಲ್ಮೆತ್ತಾರ್ , ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್, ಮಾಜಿ ನಗರ ಸಭಾ ಅಧ್ಯಕ್ಷೆ ಜಯಂತಿ ಬಲ್ನಾಡ್ ಬಹುಮಾನ ವಿತರಿಸಿದರು.
ಬ್ಲಾಕ್ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಚಂದ್ರಕಲಾ ಮನಿಯ ಹಾಗೂ ವೀಣಾ ಮಹಿಳಾ ಕಾಂಗ್ರೆಸ್ ಸಂಘಟಣೆಯ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಈ ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಕೋಶಾಧಿಕಾರಿ ಶುಭ ಮಾಲಿನಿ ಮಲ್ಲಿ,ಬ್ಲಾಕ್ ಉಪಾಧ್ಯಕ್ಷರಾದ ಸಿಂತಿಯಾ ಡಿ ಸೋಜಾ,ಬ್ಲಾಕ್ ಪ್ರದಾನ ಜಿಲ್ಲಾ ಕಾರ್ಯದರ್ಶಿ ಸೀತಾ ಉದಯ ಶಂಕರ್ ಭಟ್ ಚಂಬರಡ್ಕ, ಕಾರ್ಯದರ್ಶಿ ಹಾಗೂ ಪಂಚಾಯತ್ ಸದಸ್ಯರಾದ ಬಿ ಸಿ ಚಿತ್ರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಅಸ್ಮಾ ಗಟ್ಟಮನೆ, ಪ್ರದಾನ ಕಾರ್ಯದರ್ಶಿ ಸನಮ್ ನಝೀರ್, ಜಿಲ್ಲಾ ಕಾರ್ಯದರ್ಶಿ ಕೆ ವಿಜಯಲಕ್ಷ್ಮಿ ಕೂರ್ನಡ್ಕ ಬ್ಲಾಕ್ ಪದಾಧಿಕಾರಿಗಲಾದ ಗ್ರೆಟ್ಟಾ ಡಿ ಸೋಜಾ, ಪೂಜಾ ವಸಂತ್, ನಳಿನಿ, ಪ್ರತೀಕ ಪೂರ್ಣೇಶ್, ಸುಮಲತಾ, ಸುಂದರಿ, ಸುಶೀಲ ಬೈಲಾಡಿ ಮೊದಲಾದವರು ಉಪಸ್ಥಿತರಿದ್ದರು. ರೋಸ್ಲಿ ಮರೀಲ್ ಸ್ವಾಗತಿಸಿ, ವಂದಿಸಿದರು.